ಧಾರ್ಮಿಕ

ಧರ್ಮಸ್ಥಳವನ್ನು ಕಬಳಿಸಲು ಸರ್ಕಾರದ ಪ್ರಯತ್ನ ಆರಂಭ: ಮಾಜಿ ಸಂಸದ ಪ್ರತಾಪ ಸಿಂಹ

Views: 92

ಕನ್ನಡ ಕರಾವಳಿ ಸುದ್ದಿ:ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಪ್ರಯತ್ನ ಆರಂಭ ಮಾಡಿದೆ. ಧರ್ಮಾಧಿಕಾರಿ ಹೆಗ್ಡೆ ಅವರು ಯಾಕೆ ನಿಮಗೆ ಟಾರ್ಗೆಟ್, ಅನಾಮಿಕನ ಪೂರ್ವಾಪರ ಮೊದಲು ಬಹಿರಂಗ ಆಗಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.

ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆ ಯಿಂದ ತನಿಖೆ ಆಗಿದೆ. ಬೇರೆ ಇನ್ನೂ ಯಾವುದಾದರೂ ಮೂಲಕ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ.

ರಾಜ್ಯ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಅರೋಪಿ ಅಂತ ತೀರ್ಮಾನ ಮಾಡಿ ಅದಕ್ಕೆ ಬೇಕಾದ ಸಾಕ್ಷಿ ಈಗ ಹುಡುಕುತ್ತಿದೆ. ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವುದ್ ಇಬ್ರಾಹಿಂ ಥರ ದೊಡ್ಡ ಡಾನಾ, ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಒಂದೇ ಒಂದು ಸಾಕ್ಷಿ ಇಲ್ಲದೆ ಯಾಕೆ ವಿರೇಂದ್ರ ಹೆಗ್ಡೆ ಅವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ, ಹಿಂದೂ ಸಮಾಜ ಪ್ರಜಾವಂತಿಕೆ ಕಳೆದುಕೊಂಡಿದೆ. ಧರ್ಮಸ್ಥಳ ಟಾರ್ಗೆಟ್ ಮಾಡಿರುವುದು ಹಿಂದೂ ಸಮಾಜಕ್ಕೆ ಅರ್ಥವಾಗುತ್ತಿಲ್ಲ.

ಆರೋಪಿಯನ್ನು ಮೊದಲೆ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು. ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಹುಡುಕಾಟಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಸೌಜನ್ಯ ಪರ ಅರ್ಜಿ ಸಲ್ಲಿಸುವೆ ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಮೂಡಿಸಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಹುಡುಕಾಟಕ್ಕೂ ಸಂಬಂಧವೇ ಇಲ್ಲ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭ ಮಾಡಿದೆ ಎಂದರು.

ಅನಾಮಿಕನ ಪೂರ್ವಾಪರ ಮೊದಲು ಬಹಿರಂಗ ಪಡಿಸಲಿ. ಸೌಜನ್ಯ ಪ್ರಕರಣದಲ್ಲಿ ಮೂರು ಸಂಸ್ಥೆಗಳು ತನಿಖೆ ನಡೆಸಿವೆ. ಇನ್ನೂ ಯಾವುದಾದರೂ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ನನಗೆ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ ಎಂದು ಹೇಳಿದರು.

Related Articles

Back to top button
error: Content is protected !!