ಇತರೆ

ಮಂಗಳಮುಖಿಯಂತೆ ವೇಷ ಧರಿಸಿ ಫ್ಲಾಟ್‌ಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ!

Views: 34

ಕನ್ನಡ ಕರಾವಳಿ ಸುದ್ದಿ: ಮಂಗಳಮುಖಿಯಂತೆ ನಟಿಸಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ಮಕ್ಕಳಿಲ್ಲದ ಮಹಿಳೆಗೆ ಆಶೀರ್ವಾದ ಮಾಡುವುದಾಗಿ ಹೇಳಿಕೊಂಡು ಮಂಗಳಮುಖಿಯಂತೆ ನಟಿಸಿ ಬಂದ ಅನಿಲ್ ಶಿಂಧೆ (30) ಎಂಬಾತ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯಿಂದ 2,000 ರೂಪಾಯಿಯನ್ನು ಕಸಿದುಕೊಂಡು ಪರಾರಿಯಾಗಿದ್ದನು. ಘಟನೆ ನಡೆದ ದಿನ ರಾತ್ರಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮುಂಬೈನ ಪೊವೈನಲ್ಲಿ ನಡೆದಿದೆ.

ಮಂಗಳಮುಖಿಯಂತೆ ನಟಿಸಿ ಬಂದ ಅನಿಲ್ ಶಿಂಧೆ ಎಂಬಾತ ಪೊವೈನ ವಸತಿ ಕಟ್ಟಡದಲ್ಲಿ ವಾಸವಾಗಿದ್ದ ಮಹಿಳೆಗೆ ಮಗು ಕರುಣಿಸುವ ವಿಧಿವಿಧಾನಗಳನ್ನು ಮಾಡುವುದಾಗಿ ಹೇಳಿ ಬಂದಿದ್ದಾನೆ. ಇದನ್ನು ನಂಬಿದ ಮಹಿಳೆ ಆತನನ್ನು ಮನೆಯೊಳಗೆ ಕರೆದುಕೊಂಡು ಬಂದಿದ್ದು,ಬಳಿಕ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮಂಗಳಮುಖಿಯರಂತೆ ಮಹಿಳೆಯರ ಬಟ್ಟೆಗಳನ್ನು ಧರಿಸಿದ ಅನಿಲ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 2,000 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಪೊಲೀಸರು ಕಟ್ಟಡದ ಸಮೀಪದಿಂದ ಆತ ಪಡೆದುಕೊಂಡಿದ್ದ ಆಟೋ ರಿಕ್ಷಾವನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಅದೇ ದಿನ ರಾತ್ರಿ ಕಲ್ವಾದಲ್ಲಿ ಬಂಧಿಸಿದ್ದಾರೆ.

ಪತಿ ಮತ್ತು ವೃದ್ಧ ಸಂಬಂಧಿಯೊಂದಿಗೆ ಪೊವೈನಲ್ಲಿ ಮಹಿಳೆ ವಾಸಿಸುತ್ತಿದ್ದು, ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಬುಧವಾರ ಮಧ್ಯಾಹ್ನ ಶಿಂಧೆ ಮಹಿಳೆಯಂತೆ ವೇಷ ಧರಿಸಿ ಅವರಿದ್ದ ಫ್ಲಾಟ್‌ಗೆ ಬಂದಿದ್ದನು. ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದು, ವೃದ್ಧ ವ್ಯಕ್ತಿ ಆತನನ್ನು ಮನೆಯೊಳಗೇ ಬಂದು ಮಹಿಳೆಗೆ ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದರು.

ಮಹಿಳೆಯೊಂದಿಗೆ ಕೆಲವು ನಿಮಿಷಗಳ ಕಾಲ ಮಾತನಾಡಿದ ಆತ ಆಕೆಯನ್ನು ಹಾಸಿಗೆಯ ಮೇಲೆ ಮಲಗುವಂತೆ ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆಕೆಯಿಂದ 2,000 ರೂ. ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸುಮಾರು ಒಂದು ಗಂಟೆಯ ಬಳಿಕ ಆಕೆಯ ಪತಿ ಮನೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದರು.

ಈ ಕುರಿತು ಪೊವೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಜಾಲಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದರು. ತನಿಖೆ ವೇಳೆ ಆತ ಮಂಗಳಮುಖಿಯಲ್ಲ ಎಂಬುದು ತಿಳಿದು ಬಂದಿದೆ. ಶಿಂಧೆಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Related Articles

Back to top button
error: Content is protected !!