ಕುಂದಾಪುರ: ಹಿಂದೂ ಸಂಘಟನೆಯ ಪ್ರಮುಖ ಪ್ರದೀಪ್ ಸಂಗಮ್ ನಿಧನ
Views: 0
ಕನ್ನಡ ಕರಾವಳಿ ಸುದ್ದಿ: ಹಿಂದೂ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಂಘಟನಾತ್ಮಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ಪ್ರದೀಪ್ ಸಂಗಮ್ (44) ಅವರು ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಪ್ರದೀಪ್ ಸಂಗಮ್ ತೀವ್ರ ಗಾಯಗೊಂಡಿದ್ದರು. ಈ ಮೊದಲು ನೇತ್ರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಅಪಘಾತದ ಬಳಿಕ ಏರುಪೇರಾಗಿ, ಕಳೆದೊಂದು ವರ್ಷದಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು.
ಅವರು ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಹಗಲು-ರಾತ್ರಿ ಎನ್ನದೆ ಸಂಘಟನೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಪ್ರದೀಪ್ ಸಂಗಮ್ ಅವರ ನಿಧನದಿಂದ ಕುಂದಾಪುರ ಭಾಗದ ಹಿಂದೂ ಸಂಘಟನೆಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ಸಂಘಟನಾತ್ಮಕ ಬದ್ಧತೆ, ಕಾರ್ಯತತ್ಪರತೆ ಹಾಗೂ ಸಮಾಜಮುಖಿ ಸೇವೆಯನ್ನು ಸಹಪಾಠಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಸ್ಮರಿಸಿದ್ದಾರೆ.
ಇಂದು ಸಂಜೆ ಗಂಟೆ 5:30 ಕ್ಕೆ ಕೋಟೇಶ್ವರದ ಮಾರ್ಕೋಡು, ಗೊಲ್ಲರಕೇರಿಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನ ನೆರವೇರಲಿದೆ. ತದನಂತರ ಸಂಗಮ್ ಹಿಂದು ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.






