ಯುವಜನ

ಛತ್ತೀಸ್‌ಗಢದಿಂದ ಬಂದು ಉಪ್ಪಳದಲ್ಲಿ ಪ್ರಿಯಕರನನ್ನು ಪತ್ತೆಹಚ್ಚಿದ ಯುವತಿ!

Views: 77

ಕನ್ನಡ ಕರಾವಳಿ ಸುದ್ದಿ:ಪ್ರಿಯಕರನನ್ನು ಹುಡುಕಿಕೊಂಡು ಛತ್ತೀಸ್‌ಗಢದಿಂದ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ 19 ವರ್ಷದ ಯುವತಿಯೊಬ್ಬಳು ಪ್ರಿಯಕರನ ಅಗಲಿಕೆಯನ್ನು ಸಹಿಸಲಾರದ ಯುವತಿ, ಯಾರಿಗೂ ತಿಳಿಸದೆ ಹಲವು ರಾಜ್ಯಗಳನ್ನು ದಾಟಿ ಆತನನ್ನು ಹುಡುಕುತ್ತಾ ಉಪ್ಪಳಕ್ಕೆ ತಲುಪಿದ್ದಾಳೆ.

19 ವರ್ಷದ ಯುವತಿ ಮತ್ತು ಅದೇ ರಾಜ್ಯದ ಯುವಕನ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಯುವಕನು ಕೆಲಸದ ಹುಡುಕಾಟದಲ್ಲಿ ಛತ್ತೀಸ್‌ಗಢದಿಂದ ಕೇರಳದ ಉಪ್ಪಳಕ್ಕೆ ಬಂದು ಅಲ್ಲಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.

ಕೆಲಸ ಮಾಡುತ್ತಿದ್ದ ಪ್ರಿಯಕರನನ್ನು ಹುಡುಕಿಕೊಂಡು ಯುವತಿ ಒಂದು ವಾರದ ಹಿಂದೆ ಇಲ್ಲಿಗೆ ಬಂದಿದ್ದಳು. ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ನೀಡಿದ ದೂರಿನ ಮೇರೆಗೆ ಛತ್ತೀಸ್‌ಗಢ ಪೊಲೀಸರು ಉಪ್ಪಳಕ್ಕೆ ಆಗಮಿಸಿ ಯುವತಿಯನ್ನು ಪತ್ತೆಹಚ್ಚಿದರು.

ಇತ್ತ ಯುವತಿ ಕಾಣೆಯಾದ ಬಗ್ಗೆ ಛತ್ತೀಸ್‌ಗಢದಲ್ಲಿ ಪ್ರಕರಣ ದಾಖಲಾಗಿತ್ತು. ಮೊಬೈಲ್ ಲೊಕೇಶನ್ ಆಧರಿಸಿ ತನಿಖೆ ನಡೆಸಿದ ಛತ್ತೀಸ್‌ಗಢ ಪೊಲೀಸರು ಮಂಜೇಶ್ವರಂ ಪೊಲೀಸರ ನೆರವು ಪಡೆದರು. ಜಂಟಿ ಕಾರ್ಯಾಚರಣೆ ನಡೆಸಿ ಉಪ್ಪಳದಲ್ಲಿ ಕಮಿಟಾದ ಜೋಡಿ ಇದ್ದ ಸ್ಥಳ ಮತ್ತು ಯುವಕ ಕೆಲಸ ಮಾಡುತ್ತಿದ್ದ ಹೋಟೆಲ್ ಅನ್ನು ಪತ್ತೆಹಚ್ಚಿದರು.

ಆದರೆ ಪೊಲೀಸರೊಂದಿಗೆ ಒಬ್ಬಳೇ ತೆರಳಲು ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಪ್ರಿಯಕರನೊಂದಿಗೆ ಛತ್ತೀಸ್‌ಗಢ ಪೊಲೀಸರು ಹಿಂದಿರುಗಿದ್ದಾರೆ.

 

 

Related Articles

Back to top button
error: Content is protected !!