ಡಾ.ರಾಘವೇಂದ್ರ ಉಳ್ಳೂರ ಅವರಿಗೆ “ಕರ್ಣಾಟನಾಡಪೋಷಕ ಪ್ರಶಸ್ತಿ”ಪ್ರದಾನ
Views: 42
ಕನ್ನಡ ಕರಾವಳಿ ಸುದ್ದಿ: ನಮ ತುಳುವೆರ್ ಕಲಾ ಸಂಘಟನೆ (ರಿ.), ನಾಟ್ಕದೂರು, ಮುದ್ರಾಡಿ, ಹೆಬ್ರಿ, ಉಡುಪಿ ಜಿಲ್ಲೆ ಇವರ ವತಿಯಿಂದ ಆಯೋಜಿಸಲಾದ 26ನೇ ವರ್ಷದ ನವರಂಗೋತ್ಸವ ಹಾಗೂ 41ನೇ ವರ್ಷದ ಸಂಭ್ರಮದ ಪ್ರಯುಕ್ತ, ದಿನಾಂಕ 11-10-2026ರ ಭಾನುವಾರದಂದು ನಡೆದ ಸಮಾರಂಭದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಧರ್ಮಸಿಂಧು ಸ್ಪಿರಿಚುಯಲ್ ಲೈಫ್, ಮುಳ್ಳುಗುಡ್ಡೆ, ಕುಂದಾಪುರ ಇದರ ಸಂಸ್ಥಾಪಕರಾದ ಡಾ.ರಾಘವೇಂದ್ರ ಉಳ್ಳೂರ ಅವರಿಗೆ 2026–2027ನೇ ಸಾಲಿನ ಪ್ರತಿಷ್ಠಿತ “ಕರ್ಣಾಟನಾಡಪೋಷಕ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ನಾಟ್ಕ ಮುದ್ರಾಡಿಯ ಅಧ್ಯಕ್ಷರಾದ ಶ್ರೀ ಸುಕುಮಾರ್ ಮೋಹನ್, ಹೆಗ್ಗದ್ದೆ ಮಾಧ್ಯಮದ ಶ್ರೀ ಸಂದೀಪ್ ಶೆಟ್ಟಿ, ಉಡುಪಿಯ ರಂಗ ನಿರ್ದೇಶಕರಾದ ಶ್ರೀ ಪ್ರಶಾಂತ್ ಉದ್ಯಾವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಡಾ.ರಾಘವೇಂದ್ರ ಉಳ್ಳೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅವರ ಆಧ್ಯಾತ್ಮಿಕ ಸೇವೆ ಹಾಗೂ ಸಾಧನೆಗೆ ಸಂದ ಗೌರವವಾಗಿದ್ದು, ಈ ಮನ್ನಣೆಯು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಮುಂದಿನ ಸೇವಾಕಾರ್ಯಗಳಿಗೆ ಪ್ರೇರಣೆಯಾಗಲಿದೆ.






