ಶಿಕ್ಷಣ

ಮೌಲ್ಯ ಶಿಕ್ಷಣ

ಯೋಗ- ಕ್ಷೇಮ

Views: 56

     ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಾಕಷ್ಟು ಅವಕಾಶವಿಲ್ಲದೆ ಕೇವಲ ನಾಲ್ಕು ಗೋಡೆಗಳ ಮಧ್ಯೆ, ಯಾವುದೋ ಒಂದು ವಿಷಯಕ್ಕೆ ಮಾತ್ರ ಶಿಕ್ಷಣ ದೊರೆಯುತ್ತಿದ್ದು, ಅದೇ ವಿಷಯದಲ್ಲಿ ಪದವಿ ಪಡೆಯುವುದು ನಮ್ಮದಾಗಿದೆ. ಗುರಿ ಇಲ್ಲದ, ಮಾಗ೯ದಶ೯ನ ವಿಲ್ಲದ ಶಿಕ್ಷಣ ದೊರೆಯದೇ ಹೋದಾಗ ಸಂಸ್ಕಾರ ಹೀನ ಯುವಜನಾಂಗ ಸೃಷ್ಟಿಯಾಗಿ ದುಶ್ಚಟ -ದುಷ್ಕೃತ್ಯ ಮುಂತಾದ ಚಟುವಟಿಕೆಗಳ ಕಡೆಗೆ ಆಕಷಿ೯ತರಾಗಿ ಸಮಾಜ ಘಾತಕ ಶಕ್ತಿಯಾಗಿ ಗುರುತಿಸ್ಪಡುತ್ತಾರೆ.
       ತಾತ್ಕಾಲಿಕ ಸುಖ, ಆಡಂಬರ ಜೀವನದ ಶೈಲಿಗಾಗಿ ಇನ್ನೊಬ್ಬರೊಂದಿಗೆ ಹೋಲಿಕೆ ಜೀವನದಿಂದ ಏನನ್ನೊ ಪಡೆಯಲು ಹೋಗಿ ದುರಾಸೆಯಿಂದ ಅದು ಕೈಗೆಟುಕದಿದ್ದಾಗ ಸಹಜವಾಗಿ ಮನುಷ್ಯ ನಿರಾಶೆಗೆ ಒಳಗಾಗುತ್ತಾನೆ. ಇಂತಹ ಒತ್ತಡಮಯ ಜೀವನದಿಂದ ಮಾನವೀಯ ಸಂಸ್ಕಾರ, ಮಾನವೀಯ ಮೌಲ್ಯ, ಕೌಟುಂಬಿಕ ಸಂಬಂಧ, ಸದ್ಬಾವ- ಸದ್ಗುಣಗಳನ್ನು ಕಳೆದು ಕೊಳ್ಳುತ್ತಾರೆ. ಇದರಿಂದಲೇ ಸ್ವಾಥ೯,ದುರಾಸೆ, ಅಸೂಯೆ ಕೋಪಕ್ಕೆ ಒಳಗಾಗುತ್ತಾರೆ.
ನಿಂತಲ್ಲೆ ನಿಲ್ಲದ ಮನಸ್ಸನ್ನು ಒಂದು ಕಡೆ ಕೇಂದ್ರಿಕರಿಸುವುದು. ಅಂದರೆ ಮನಸ್ಸು, ದೇಹ, ಬುದ್ಧಿಯನ್ನು ಒಂದುಗೂಡಿಸುವುದೇ ‘ ‘ಯೋಗ’ ಅದಕ್ಕಾಗಿ ಅಷ್ಟಾಂಗ ಯೋಗದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನದಿಂದ ಸಾದ್ಯ.
ಆಂತರಿಕವಾಗಿ ಒಂದಕ್ಕೊಂದು ಬೆಂಬಲ ಮತ್ತು ಸಂಬಂಧ ಹೊಂದಿದೆ ಇದರಿಂದ ಮನಸ್ಸು ಶುದ್ಧಿಯಾಗಿ ಸುಖ, ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ. ಇದರೊಂದಿಗೆ ನಮ್ಮಲ್ಲಿ ಸೇವಾ ಮನೋ‌ಭಾವನೆ ಜಾಸ್ತಿಯಾಗಿ ಅಹಂಕಾರ ತನ್ನಿಂದ ತಾನೇ ನಾಶವಾಗುತ್ತದೆ ಹೀಗೆ ನಿರಾಡಂಬರದಿಂದ ಸಮಪ೯ಣಾ ಮನೋಭಾವನೆ ಮತ್ತು ಶೃದ್ಧಾ ಮನೋಭಾವನೆಯಿಂದ ಶಾಂತಿ ದೊರೆಯುತ್ತದೆ. ಹೀಗೆ ತಾತ್ಕಾಲಿಕ ಮುದ ನೀಡುವ ಆಕಷ೯ಣೆಗಳತ್ತ ವಿಚಲಿತರಾಗದೆ ದೀಘ೯ಕಾಲಿಕ ಪರಮಾನಂದ ನೀಡುವ ಬದುಕನ್ನು ಆನಂದಿಸುವ ಜೀವನದ ಗುರಿ ನಮ್ಮದಾಗುತ್ತದೆ.
     ಸುಧಾಕರ ವಕ್ವಾಡಿ

Related Articles

Back to top button