ಕರಾವಳಿ

ಕುಂದಾಪುರ: ಮರವಂತೆಯಲ್ಲಿ ಕಡಲ ತೀರಕ್ಕೆ ಬಂದ ಬೂತಾಯಿ ಮೀನುಗಳು.. ಮುಗಿಬಿದ್ದ ಜನರು!

Views: 91

ಕನ್ನಡ ಕರಾವಳಿ ಸುದ್ದಿ: ಮರವಂತೆಯ ಮಾರಸ್ವಾಮಿ ದೇವಸ್ಥಾನದ ಎದುರಿನ ಕಡಲ ತೀರಕ್ಕೆ ಫೆ.21ರ ಶನಿವಾರ ಮಧ್ಯಾಹ್ನದ ವೇಳೆಗೆ ಬೈಗೆ (ಬೂತಾಯಿ) ಮೀನುಗಳು ಬಂದಿದ್ದು, ಇದನ್ನು ಕಂಡ ಸ್ಥಳೀಯರು, ಪ್ರವಾಸಿಗರು, ವಾಹನಗಳ ಚಾಲಕರು ಮೀನು ಹೆಕ್ಕಲು ಮುಗಿಬಿದ್ದ ದೃಶ್ಯ ಕಂಡು ಬಂದಿದೆ.

ಕೆಲವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಮೀನು ಹೆಕ್ಕುವ ದೃಶ್ಯವನ್ನು ಸೆರೆಹಿಡಿದು, ಜಾಲತಾಣಗಳಲ್ಲಿ ಹಂಚಿದರು.

ವಿಪರೀತ ಸೆಖೆಯಿದ್ದಾಗ ತೀರದಿಂದ ದೂರ, ತಂಪಾದ ಪ್ರದೇಶಗಳಲ್ಲಿ ಹುಡುಕಿಕೊಂಡು ಹೋಗುವ ಬೂತಾಯಿ ಮೀನುಗಳು ಹೀಗೆ ತೀರಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Related Articles

Back to top button
error: Content is protected !!