ಶಿಕ್ಷಣ
ಇನ್ಮುಂದೆ ಪ್ರಥಮ ಪಿಯುಸಿ ಪಾಸಾಗಲು 33 ಅಂಕ ಸಾಕು
Views: 15
ಕನ್ನಡ ಕರಾವಳಿ ಸುದ್ದಿ: ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೂ ಉತ್ತೀರ್ಣ ರಾಗಲು ಕನಿಷ್ಠ ಅಂಕವನ್ನು 35ರಿಂದ 33ಕ್ಕೆ ಇಳಿಸಲಾಗಿದೆ.
ಈ ವರ್ಷ ದ್ವಿತೀಯ ಪಿಯುಸಿ ಮತ್ತು ಎಸೆಸೆಲ್ಸಿಯ ಉತ್ತೀರ್ಣತೆಯ ಅಂಕವನ್ನು 35ರಿಂದ 33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಅದೇ ಮಾದರಿಯನ್ನು ಪ್ರಥಮ ಪಿಯುಸಿಗೂ ವಿಸ್ತರಿಸಿದೆ. ಮೌಲ್ಯಮಾಪನ ವಿಧಾನದಲ್ಲಿ ಏಕರೂಪತೆ ತರುವುದು ಮತ್ತು ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ಉದ್ದೇಶ ದಿಂದ ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು 33ಕ್ಕೆ ನಿಗದಿ ಪಡಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.






