ಇತರೆಶಿಕ್ಷಣ

ಹೆಸಕುತ್ತೂರು ಹಿರಿಯ ಪ್ರಾಥಮಿಕ ಶಾಲೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

Views: 73

ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ನಡೆದ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ‘ಪ್ರಾಥಮಿಕ ಶಾಲಾ ವಿಭಾಗ’ದಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ಒಟ್ಟು 8 ಸ್ಪರ್ಧೆಗಳಲ್ಲಿ ‘ಪ್ರಥಮ ಸ್ಥಾನ’ ಪಡೆದು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 6 ಸ್ಪರ್ಧೆಗಳಲ್ಲಿ ‘ದ್ವಿತೀಯ ಸ್ಥಾನ’ 4 ಸ್ಪರ್ಧೆಗಳಲ್ಲಿ ‘ತೃತೀಯ ಸ್ಥಾನ ‘ ಪಡೆದು ಒಟ್ಟು 18 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಬಹುಮಾನಿತರಾಗಿದ್ದಾರೆ.

ಕಿಶನ್ (ಕನ್ನಡ ಕಂಠಪಾಠ – ಹಿರಿಯ ) ಪ್ರಥಮ, ಅಕ್ಷರ ಎ (ಇಂಗ್ಲಿಷ್ ಕಂಠಪಾಠ – ಹಿರಿಯ ) ಪ್ರಥಮ, ಅಂಕಿತಾ  (ಇಂಗ್ಲಿಷ್ ಕಂಠಪಾಠ – ಕಿರಿಯ ) ಪ್ರಥಮ, ಪಂಚಮಿ (ಅಭಿನಯ ಗೀತೆ  ಹಿರಿಯ) ಪ್ರಥಮ, ಅಂಕಿತಾ (ಅಭಿನಯ ಗೀತೆ – ಕಿರಿಯ)  ಪ್ರಥಮ, ಅದ್ವಿತ್ ವಿ ಶೆಟ್ಟಿ (ಅಶುಭಾಷಣ ಹಿರಿಯ )  ಪ್ರಥಮ, ವಂಶಿತಾ (ಪ್ರಬಂಧ ರಚನೆ – ಹಿರಿಯ ) ಪ್ರಥಮ, ಅಕ್ಷರ ಎ (ಚಿತ್ರಕಲೆ – ಹಿರಿಯ ) ಪ್ರಥಮ, ಪ್ರತೀಕ್ (ಮಿಮಿಕ್ರಿ – ಹಿರಿಯ ) ದ್ವಿತೀಯ, ಸುರಕ್ಷಾ (ಕಥೆ ಹೇಳುವುದು – ಹಿರಿಯ ) ದ್ವಿತೀಯ, ಅದ್ವಿತ್ (ಕನ್ನಡ ಕಂಠಪಾಠ – ಕಿರಿಯ ) ದ್ವಿತೀಯ ,ಪಂಚಮಿ (ಕವನ ವಾಚನ – ಹಿರಿಯ) ದ್ವಿತೀಯ, ವಂದಿತ್ (ಕ್ಲೇ ಮಾಡೇಲಿಂಗ್ – ಕಿರಿಯ ) ದ್ವಿತೀಯ, ಸಾತ್ವಿಕ್ (ಅಶುಭಾಷಣ  ಕಿರಿಯ ) ತೃತೀಯ, ಅನೇಕ ಎ (ಕಥೆ ಹೇಳುವುದು – ಕಿರಿಯ ) ತೃತೀಯ, ಪ್ರಣಿಧಿ (ಹಿಂದಿ ಕಂಠಪಾಠ ಹಿರಿಯ) ತೃತೀಯ, ತನ್ವಿ  (ಅರೇಬಿಕ್ ಧಾರ್ಮಿಕ ಪಠಣ – ಹಿರಿಯ ) ತೃತೀಯ,

ಪ್ರಶಸ್ತಿ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಎಸ್ ಡಿ ಎಂ ಸಿ, ಪೋಷಕರು ವಿಶೇಷವಾಗಿ ಅಭಿನಂದಿಸಿದ್ದಾರೆ.

Related Articles

Back to top button
error: Content is protected !!