ಸಾಂಸ್ಕೃತಿಕ

ಐಶ್ವರ್ಯಾ ಸರ್ಜಾ ದಾಂಪತ್ಯದಲ್ಲಿ ಬಿರುಕು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸುದ್ಧಿಗೆ ಸ್ಪಷ್ಟನೆ ಇಲ್ಲಿದೆ?

Views: 26

ಕನ್ನಡ ಕರಾವಳಿ ಸುದ್ದಿ: ಖ್ಯಾತ ನಟ ಅರ್ಜುನ್ ಸರ್ಜಾ ಕುಟುಂಬದಲ್ಲಿ ನಡೆದ ಮದುವೆ ಸಮಾರಂಭದ ಬೆನ್ನಲ್ಲೇ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.

ಐಶ್ವರ್ಯಾ 2024ರಲ್ಲಿ ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅವರ ವಿವಾಹ ಇಟಲಿಯಲ್ಲಿ ನಡೆದಿತ್ತು. ಈ ಸಮಾರಂಭದಲ್ಲಿ ಉಮಾಪತಿ ಕಾಣಿಸಿಕೊಂಡಿರಲಿಲ್ಲ.‌ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹರಡಿದ್ದವು.

ಆದರೆ ಈ ಸುದ್ದಿಗಳಿಗೆ ಉಮಾಪತಿ ಅವರ ತಂದೆ, ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ಇಬ್ಬರೂ ಸಂತೋಷವಾಗಿದ್ದಾರೆ. ಚೆನ್ನೈನ ನಿವಾಸದಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ದಂಪತಿಯ ದಾಂಪತ್ಯದ ಬಗ್ಗೆ ಆಧಾರವಿಲ್ಲದ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಕೈಜೋಡಿಸಿ ಮನವಿ ಮಾಡಿದ್ದಾರೆ. ತಂಬಿ ರಾಮಯ್ಯ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅವರು ಇತ್ತೀಚೆಗೆ ಇಟಲಿಯ ಪ್ರಜೆ ಇಸಾಯಾ ನಟ್ಟರ್ ಅವರನ್ನು ಇಟಲಿಯಲ್ಲೇ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

Related Articles

Back to top button
error: Content is protected !!