‘ಪ್ರೇಮದ ಊರಲಿ’ ಟಿಕೆಟ್ಗಾಗಿ ಮಹಿಳೆಯರು ಜಡೆ ಹಿಡಿದು ಹೊಡೆದಾಟ..ಮಾಂಗಲ್ಯ ಸರ ಕಿತ್ತಾಟ..!!
Views: 0
ಕನ್ನಡ ಕರಾವಳಿ ಸುದ್ದಿ: ಹಾವೇರಿಯ ಮಾಗಾವಿ ಚಿತ್ರಮಂದಿರದಲ್ಲಿ ಪ್ರೇಮದ ಊರಲಿ ಸಿನಿಮಾದ ಟಿಕೆಟ್ ಪಡೆದುಕೊಳ್ಳುವ ಸಂದರ್ಭದಲ್ಲಿ ಮಹಿಳೆಯರ ನಡುವೆ ಪ್ರಾರಂಭವಾದ ವಾಗ್ವಾದ ನಂತರ, ಕೈ-ಕೈ ಮಿಲಾಯಿಸುವ ಮಟ್ಟವನ್ನು ತಲುಪಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಸಿನಿಮಾ ಟಿಕೆಟ್ ಪಡೆಯಲು ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಒಮ್ಮಲೇ ಇಬ್ಬರು ಮಹಿಳೆಯರ ನಡುವೆ ಏನೋ ಸಮಸ್ಯೆ ಕಂಡು ಬಂದಿದೆ. ನಂತರ ಇಬ್ಬರು ಒಬ್ಬರನೊಬ್ಬರು ಅವಾಚ್ಯ ಪದಗಳಿಂದ ಬಯ್ಯುತ್ತಾ, ನಂತರ ಹೊಡೆದಾಡಲು ಶುರುವಿಟ್ಟಿದ್ದಾರೆ. ಈ ವಾಗ್ವಾದ ತಾರಕಕ್ಕೇರಿ, ಮಹಿಳೆಯರು ಪರಸ್ಪರರ ಜಡೆಯನ್ನು ಎಳೆದುಕೊಳ್ಳುತ್ತಾ, ಮಾಂಗಲ್ಯ ಸರವನ್ನು ಕೀಳುವ ಮಟ್ಟಕ್ಕೆ ಇಳಿದು, ಒಬ್ಬರನೊಬ್ಬರು ಬಡಿದಾಡಿಕೊಂಡಿದ್ದಾರೆ.
ಮಹಿಳೆಯರ ವರ್ತನೆಯಿಂದ ಕಂಗೆಟ್ಟ ಕೆಲ ಪುರುಷರು ಈ ಮಹಿಳಾ ಮಣಿಯರನ್ನು ಸುಮ್ಮನಾಗಿಸಿ, ಜಗಳವನ್ನು ಶಾಂತಪಡಿಸಲು ಮುಂದಾಗಿದ್ದಾರೆ. ಹೀಗೆ ಪರಿಹಾರಕ್ಕೆ ಮುಂದೆ ಬಂದ ಪುರುಷರ ಮೇಲೆ ಕೂಡ ಇವರು ಹರಿಹಾಯ್ದಿದ್ದು, ಕೆಟ್ಟ-ಕೊಳಕದಾಗಿ ಬಯ್ಯುತ್ತಾ, ಕೈ-ಕೈ ಮೀಲಾಯಿಸಲು ಮುಂದಾಗಿದ್ದಾರೆ.






