ಸಾಂಸ್ಕೃತಿಕ

ಬಡಗುತಿಟ್ಟು ಯಕ್ಷರಂಗದ ಖ್ಯಾತ ವೇಷಧಾರಿ ಥಂಡಿಮನೆ ಶ್ರೀಪಾದ ಭಟ್ ನಿಧನ

Views: 78

ಕನ್ನಡ ಕರಾವಳಿ ಸುದ್ದಿ: ಬಡಗುತಿಟ್ಟು ಯಕ್ಷರಂಗದ ಖ್ಯಾತ ಯಕ್ಷಗಾನ ವೇಷಧಾರಿ ಥಂಡಿಮನೆ ಶ್ರೀಪಾದ ಭಟ್(62) ಗುರುವಾರ (ಅ.15) ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ತಂದೆ, ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

ಡೇರೆ ಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ಬಯಲಾಟ ಮೇಳಗಳಲ್ಲಿಯೂ ವೇಷಧಾರಿಯಾಗಿ ಹಂತ ಹಂತವಾಗಿ ಬೆಳದು ಬಂದ ಶ್ರೀಪಾದ ಭಟ್ ಅವರು ಗತ್ತು ಗಾಂಭೀರ್ಯದ ಮೂಲಕ ನಾಯಕ ಮತ್ತು ಖಳ ನಾಯಕ ಎರಡೂ ಪಾತ್ರಗಳಲ್ಲಿ ಸೈ ಎನಿಸಿಕೊಂಡು ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.

ಭೀಷ್ಮ,ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿ ಅನೇಕ ನೂತನ ಪ್ರಸಂಗಗಳ ಪಾತ್ರಗಳಿಗೆ ಜೀವ ತುಂಬಿದ್ದರು.

ಕೆಲಕಾಲದಿಂದ ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಶ್ರೀಪಾದ್ ಭಟ್ ಅವರು ಚೇತರಿಕೊಂಡು ಮತ್ತೆ ರಂಗಕ್ಕೆ ಮರಳುವ ಮಹದಾಸೆ ಹೊಂದಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Related Articles

Back to top button
error: Content is protected !!