ನಟಿ ಅಂಬಿಕಾ ವಿರುದ್ಧ ಬರೋಬ್ಬರಿ 46 ಕೋಟಿ ರೂ.ವಂಚನೆ: ತಂಗಿಯಿಂದಲೇ ದೂರು
Views: 20
ಕನ್ನಡ ಕರಾವಳಿ ಸುದ್ದಿ: ಬಹುಭಾಷಾ ನಟಿ ಅಂಬಿಕಾಗೆ ಬರೋಬ್ಬರಿ 46 ಕೋಟಿ ರೂಪಾಯಿ ವಂಚನೆ ಆರೋಪ ಎದುರಾಗಿದೆ. ಸಹೋದರಿ, ನಟಿ ರಾಧಾ ಅಂಬಿಕಾ ವಿರುದ್ಧ ದೂರು ದಾಖಲಿಸಿದ್ದಾರೆ.
ನಟಿ ರಾಧಾ ಅವರು ಅಂಬಿಕಾ ಹಾಗೂ ಸಹೋದರ ಮಲ್ಲಿಕಾರ್ಜುನ ಕುಂಜನ್ ನಾಯರ್ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಿಸಿದ್ದಾರೆ. ನಾನು ಸಹಿ ಮಾಡಿ ಮನೆಯಲ್ಲಿ ಖಾಲಿ ಚೆಕ್‌ಗಳನ್ನು ಇಟ್ಟುಕೊಂಡಿದ್ದೆ. ಆ ಚೆಕ್‌ಗಳನ್ನು ನನ್ನ ಅನುಮತಿ ಇಲ್ಲದೆ ಬಳಸಿ ನನ್ನ ಖಾತೆಯಿಂದ ಬರೋಬ್ಬರಿ 46 ಕೋಟಿ ರೂ. ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನ್ಯಾಯ ಕೊಡಿಸಿ ಎಂದು ಕೇಳಿದ್ದಾರೆ.
ನಾನು ವ್ಯವಹಾರಕ್ಕೆ ಸಂಬಂಧಿಸಿದ ಖರ್ಚುಗಳಿಗಾಗಿ ಐಡಿಬಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೇನೆ. ತನ್ನ ಚೆನ್ನೈನಿವಾಸದಲ್ಲಿ ಖಾಲಿ ಚೆಕ್‌ಗಳಿಗೆ ಸಹಿ ಮಾಡಿ ಇಟ್ಟುಕೊಂಡಿದ್ದೆ. ಜನರಿಗೆ ಸಂಬಳ, ಕರೆಂಟ್ ಬಿಲ್, ತೋಟದ ಕೆಲಸಕ್ಕೆ ಹಣ ನೀಡಲು ಹಾಗೂ ಟ್ರಾವೆಲ್ ಮಾಡುವ ಸಂದರ್ಭದಲ್ಲಿ ಈ ಚೆಕ್‌ಗಳನ್ನು ಬಳಕೆ ಮಾಡುತ್ತಿದ್ದೆ. ಆ ಖಾತೆಯನ್ನು ಆರಂಭದಲ್ಲಿ ARS Garden Studio ಹೆಸರಿನಲ್ಲಿ ನಿರ್ವಹಿಸಲಾಗುತ್ತಿತ್ತು. 2025ರ ಜನವರಿಯಲ್ಲಿ ವ್ಯವಹಾರದ ಹೆಸರನ್ನು RR Gardens ಎಂದು ಬದಲಾಯಿಸಿದ ಬಳಿಕ ಹೊಸ ಚೆಕ್‌ಬುಕ್ ಪಡೆದಿದ್ದಾಗಿ ರಾಧಾ ತಿಳಿಸಿದ್ದಾರೆ. ಹೀಗಾಗಿ ಹಿಂದಿನ ಚೆಕ್‌ಬುಕ್ ಬಳಸುವುದನ್ನ ನಿಲ್ಲಿಸಿದ್ದರೂ, ಹಳೆಯ ಚೆಕ್‌ಗಳು ಮನೆಯಲ್ಲೇ ಉಳಿದಿರುವುದನ್ನ ತಾವು ಮರೆತಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ
ಬ್ಯಾಂಕ್‌ನಿಂದ ಇಷ್ಟು ಹಣ ತೆಗೆದಿರುವುದಾಗಿ ಮಾಹಿತಿ ನೀಡಿದ್ದರು. ಆಗ ನನಗೆ ಶಾಕ್ ಆಯ್ತು. ಐದು ಚೆಕ್‌ಗಳ ಮೂಲಕ ಬರೋಬ್ಬರಿ 46 ಕೋಟಿ ರೂಪಾಯಿಯನ್ನು ಅಂಬಿಕಾ ತನ್ನ ಅಕೌಂಟ್‌ಗೆ ಹಾಕಿಕೊಂಡಿದ್ದಾರೆ ಎಂದು ಬ್ಯಾಂಕ್ ಹೇಳಿತ್ತು. ತಕ್ಷಣವೇ ಪೇಮೆಂಟ್ ನಿಲ್ಲಿಸಲು ಹೇಳಿದೆ. ಇಷ್ಟು ದೊಡ್ಡ ಮೊತ್ತದ ವ್ಯವಹಾರ ನಮ್ಮಲ್ಲಿಲ್ಲ. ಅವರಿಗೆ ನಾನು ಹಣ ಕೊಡಬೇಕಾಗಿಯೂ ಇಲ್ಲ. ಚೆಕ್ ಕೊಟ್ಟಿಲ್ಲ. ಚೆಕ್ ವಿವರಗಳನ್ನು ಸಹೋದರ ಮಲ್ಲಿಕಾರ್ಜುನ ತುಂಬಿದ್ದರು. ಇಬ್ಬರು ಸೇರಿ ನನ್ನ ಹಣ ಲಪಟಾಯಿಸಿದ್ದಾರೆ ಎಂದು ದೂರಿದ್ದಾರೆ.






