ಸಾಂಸ್ಕೃತಿಕ
ನಿಧನದ ಸುಳ್ಳು ಸುದ್ದಿಗೆ ಸ್ವತಃ ಹಿರಿಯ ನಟಿ ಲಕ್ಷ್ಮೀ ದೇವಿ ವಿಡಿಯೋ ಮೂಲಕ ಕ್ಷೇಮವಾಗಿದ್ದೇನೆ ಎಂದು ಸ್ಪಷ್ಟನೆ
Views: 33
ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ವದಂತಿಗೆ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದ ಸುಳ್ಳು ಸುದ್ದಿಯನ್ನು ಮೊಮ್ಮಗಳು ದೀಪಿಕಾ ಶರಣ್ ಅವರು ತಳ್ಳಿಹಾಕಿದ್ದಾರೆ.
‘ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ. ಲಕ್ಷ್ಮೀದೇವಿ ಅವರಿಗೆ 92 ವರ್ಷ ವಯಸ್ಸಾಗಿದೆ. ಅವರು ನಿಧನರಾಗಿಲ್ಲ ಎಂಬ ವಿಷಯವನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ವಿಡಿಯೋ ಮೂಲಕ ಲಕ್ಷ್ಮೀದೇವಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹಿರಿಯ ಕಲಾವಿದರ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ. ಈ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆ ಕೂಡ ಇಂಥ ಫೇಕ್ ನ್ಯೂಸ್ ಹರಿದಾಡಿತ್ತು. ಅವರು ಕೂಡ ಸ್ವತಃ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದ್ದರು. ಈಗ ಲಕ್ಷ್ಮೀದೇವಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.






