ಇತರೆ

ಕೆರೆ ಬಳಿ ಚೀಲದಲ್ಲಿ ಹಾಕಿ ಬಿಸಾಕಿದ್ದ ನವಜಾತ ಹೆಣ್ಣು ಶಿಶು ರಕ್ಷಣೆ 

Views: 0

ಕನ್ನಡ ಕರಾವಳಿ ಸುದ್ದಿ: ಮಾನವೀಯತೆ ಮರೆತ ಪಾಪಿಗಳು ಹುಟ್ಟಿದ ಕೆಲವೇ ಗಂಟೆಗಳ ನವಜಾತ ಹೆಣ್ಣು ಶಿಶುವನ್ನು ಚೀಲದಲ್ಲಿ ಹಾಕಿ ಕೆರೆ ಬಳಿ ಬಿಸಾಕಿ ಹೋದ ಅಮಾನವೀಯ ಘಟನೆ ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದಲ್ಲಿ ನಡೆದಿದೆ.

ಗೋನೂರು ಗ್ರಾಮದ ಹೊರವಲಯದಲ್ಲಿರುವ ಕೆರೆ ಬಳಿ ಬೆಳಗ್ಗೆ ಚೀಲವೊಂದು ಬಿದ್ದಿರುವುದನ್ನು ಗ್ರಾಮದ ಕೆಲವರು ಗಮನಿಸಿದ್ದಾರೆ. ಅನುಮಾನಗೊಂಡು ಚೀಲವನ್ನು ತೆರೆದು ನೋಡಿದಾಗ ಅದರೊಳಗೆ ನವಜಾತ ಹೆಣ್ಣು ಮಗು ಇರುವುದು ಕಂಡುಬಂದಿದೆ. ತಕ್ಷಣ ಗ್ರಾಮಸ್ಥರು ಮಗುವನ್ನು ಹೊರತೆಗೆದು ರಕ್ಷಣೆ ಮಾಡಿದ್ದಾರೆ.

ಹಸಿವು ಮತ್ತು ಬಿಸಿಲಿನಿಂದ ಬಳಲುತ್ತಿದ್ದ ಮಗುವಿಗೆ ಗ್ರಾಮದ ಮಹಿಳೆಯರು ತಕ್ಷಣ ನೀರು ಕುಡಿಸಿ, ಸ್ವಚ್ಛಗೊಳಿಸಿ ಆರೈಕೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಗುವನ್ನು ಹಸ್ತಾಂತರಿಸಲಾಗಿದೆ.

ಸದ್ಯ ಹೆಣ್ಣು ಮಗುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆಣ್ಣು ಎಂದು ಹುಟ್ಟಿದ ಕೂಡಲೇ ಮಗುವನ್ನು ಬಿಸಾಕಿದವರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button
error: Content is protected !!