ಇತರೆ
ರಾತ್ರಿ ಮಲಗಿದ್ದಾಗ ಮೈಮೇಲೆ ಏನೋ ಹರಿದಾಡಿದ ಅನುಭವ: ಬೆಳಿಗ್ಗೆ ಎದ್ದು ನೋಡಿದಾಗ ನಾಗರ ಹಾವನ್ನು ಕಂಡು ಬಿಚ್ಚಿ ಬಿದ್ದ ಅಣ್ಣ ತಂಗಿ..!!
Views: 54
ಕನ್ನಡ ಕರಾವಳಿ ಸುದ್ದಿ: ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದ ಅನುಭವ ಉಂಟಾಗಿದ್ದು, ಇಲಿ ಎಂದು ಭಾವಿಸಿ ನಿರ್ಲಕ್ಷಿಸಿ ನಿದ್ರೆಗೆ ಜಾರಿದ ಅಣ್ಣ ತಂಗಿ ಬೆಳಗಿನ ಜಾವ ಎದ್ದು ನೋಡಿದಾಗ ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿದ್ದ ನಾಗರ ಹಾವನ್ನು ಕಂಡು ಇಡೀ ಕುಟುಂಬ ಬೆಚ್ಚಿಬಿದ್ದ ಘಟನೆ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಕಿಟಕಿಯ ಮೂಲಕ ಮನೆಯೊಳಗೆ ಹೊಕ್ಕ ನಾಗರಹಾವು ಮಲಗಿದ್ದ ಅಣ್ಣ ತಂಗಿಯ ಹಾಸಿಗೆಯಲ್ಲೇ ಮಲಗಿದೆ. ರಾತ್ರಿ ಇಡೀ ಗಾಢ ನಿದ್ರೆಯಲ್ಲಿದ್ದ ಇಬ್ಬರ ಮೈಮೇಲೂ ಈ ವಿಷಪೂರಿತ ಸರ್ಪ ಹರಿದಾಡಿದೆ.
ಕುಟುಂಬದವರು ಕೂಡಲೇ ಉರಗ ರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷ ಸರ್ಪ ಇರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ನಾಗೇಂದ್ರ ಅವರು, ಯಾವುದೇ ಅಪಾಯವಿಲ್ಲದೆ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸಿ ಹೆಸರಘಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.






