ಇತರೆ

ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆ ಬಲಿ 

Views: 37

ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿಯಲ್ಲಿ ಗಾಳಿ ಪಟಕ್ಕೆ ಹಾರಿಸುವ ಮಾಂಜಾ ದಾರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ಧಾರುಣ ಘಟನೆ ಇಲ್ಲಿನ ಕಾರವಾರ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ನಗರದ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಹಳೇಹುಬ್ಬಳ್ಳಿ ಬೀರಬಂದ್ ಓಣಿಯ ನಿವಾಸಿ ವಿದ್ಯಾ ಮಂಜುನಾಥ ಗೌಡರ(38) ಮೃತಪಟ್ಟವರು.

ಕಾರವಾರ ರಸ್ತೆಯಲ್ಲಿ ಲ್ಯಾಬ್‌ಗೆ ಕೆಲಸಕ್ಕೆಂದು ಸ್ಕೂಟಿಯಲ್ಲಿ ಹೊರಟ್ಟಿದ್ದ ವೇಳೆ ಕಾರವಾರ ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದ ಗಾಳಿಪಟದ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಕೊಯ್ದಿದಿದೆ. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮೃತಪಟ್ಟಿದ್ದಾರೆ.

Related Articles

Back to top button
error: Content is protected !!