ಇತರೆ

ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ ಮೂರೇ ವರ್ಷಕ್ಕೆ ಶವವಾಗಿ ಪತ್ತೆ, ಪತಿ ಎಸ್ಕೇಪ್!

Views: 40

ಕನ್ನಡ ಕರಾವಳಿ ಸುದ್ದಿ: ಶಾಲೆಗೆ ಹೋಗುವಾಗ ಬಸ್ ಚಾಲಕ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದ ಹಿಂದೂ ಯುವತಿ ಮೂರು ವರ್ಷದ ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಶಾ (30) ಮೃತ ಮಹಿಳೆ. ನೇಣು ಬಿಗಿದ ಸ್ಥಿತಿಯಲ್ಲಿ ಆಶಾ ಶವ ಪತ್ತೆಯಾಗಿದೆ. ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಆಶಾ ಸಾವಿನ ಬೆನ್ನಲ್ಲೇ ಪತಿ ನಾಪತ್ತೆಯಾಗಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಶಾ ಕೇರಳ ಮೂಲದ ಬಸ್ ಚಾಲಕ ಇಮ್ರಾನ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಓರ್ವ ಮಗನಿದ್ದಾನೆ. ಮದುವೆಯಾದ ಮೂರನೇ ವರ್ಷದಲ್ಲಿ ಈಗ ಆಶಾ ಶವವಾಗಿ ಪತ್ತೆಯಾಗಿದ್ದಾಳೆ.

ಒಂದೂವರೆ ತಿಂಗಳ ಹಿಂದಷ್ಟೇ 1 ಲಕ್ಷ ಹಣ ಕೊಟ್ಟಿದ್ದೆವು. ಇಷ್ಟಾದ್ರೂ ಆಶಾ ಮನೆಯವರು ಸುಮ್ಮನಾಗಿಲ್ಲ. ಈಗ ನೇಣುಬಿಗಿದು, ಆತ್ಮಹತ್ಯೆ‌ ಕತೆ ಕಟ್ಟಿ ಕುಟುಂಬದವರು ಎಸ್ಕೇಪ್ ಆಗಿದ್ದಾರೆ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ.

ಇನ್ನು ಹಿಂದೂ ಸಂಘಟನೆಗಳು ಸಮಗ್ರ ತನಿಖೆ ನಡೆಸಿ ಎಂದು ಹಿರಿಯೂರು ನಗರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button
error: Content is protected !!