ಯುವಜನ

ಕೋಟೇಶ್ವರ: ದೊಡ್ಡೋಣಿ ನಿವಾಸಿ ಜೀವನ್ ಬೆಂಗಳೂರಿನಲ್ಲಿ ಶೆಟ್ಲ್ ಆಡುತ್ತಿರುವಾಗ ಕುಸಿದು ಬಿದ್ದು ಸಾವು 

Views: 260

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ರಥಬೀದಿ ದೊಡ್ಡೋಣಿ ನಿವಾಸಿ ಜೀವನ್ (42) ಬೆಂಗಳೂರಿನಲ್ಲಿ ಸೆಟ್ಲ್ ಆಡುತ್ತಿರುವಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೋಟೇಶ್ವರದ ದೊಡ್ಡೋಣಿ ರಸ್ತೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ನಾಗರಾಜ್ ಮಿತ್ಯಂತಾಯ ಅವರ ಪುತ್ರ ಜೀವನ್ ಮೃತಪಟ್ಟವರು.

ಮೃತರಿಗೆ ಪತ್ನಿ, 11 ವರ್ಷದ ಪುತ್ರನನ್ನು ಅಗಲಿದ್ದಾರೆ.

ಮೃತರು ಕೋಟೇಶ್ವರ ನ್ಯಾರಂಬಳ್ಳಿ ಡಾ.ಸಬಿತಾ ಆಚಾರ್ಯ ಅವರ ಸಹೋದರಿಯ ಪುತ್ರನಾಗಿರುತ್ತಾರೆ. ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ಸೆಟ್ಲ್ ಆಡುತ್ತಿರುವಾಗ ತೀವ್ರ ಅಸ್ವಸ್ಥರಾಗಿ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಎಂದು ತಿಳಿಯಲಾಗಿದೆ.

ಜೀವನ್ ಅವರು ಅತ್ಯುತ್ತಮ ಆಲ್ರೌಂಡರ್ ಆಟಗಾರನಾಗಿ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ವಿಜಯ ಕ್ರಿಕೆಟರ್ಸ್ ಕೋಟೇಶ್ವರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ,ಹಲವಾರು ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ,ಮಾರ್ಗದರ್ಶನ ನೀಡುತ್ತಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಅವರ ಅಗಲಿಕೆಯಿಂದ ಕೋಟೇಶ್ವರದಲ್ಲಿ ಅವರ ಒಡನಾಡಿಗಳು, ಆತ್ಮೀಯರು ಕಂಬನಿ ಮಿಡಿದಿದ್ದಾರೆ

ಮೃತರ ಪಾರ್ಥಿವ ಶರೀರ ಅ. 22ರಂದು ಸಂಜೆ ಕೋಟೇಶ್ವರದ ನಿವಾಸಕ್ಕೆ ತರಲಾಗುತ್ತದೆ. ನಂತರ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ತಿಳಿದುಬಂದಿದೆ.

Related Articles

Back to top button
error: Content is protected !!