ಯುವಜನ
ಪ್ರಿಯಕರನಿಗೆ ಜಾಮೀನು ಕೊಡಿಸಲು ಬೇಕಿದ್ದ ಹಣ ಹೊಂದಿಸಲು ಮಾದಕ ವಸ್ತು ಸಾಗಿಸಿದ ಪ್ರಿಯತಮೆ ಅರೆಸ್ಟ್
Views: 21
ಕನ್ನಡ ಕರಾವಳಿ ಸುದ್ದಿ: ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಿಯಕರನಿಗೆ ಜಾಮೀನು ಕೊಡಿಸಲು ಬೇಕಿದ್ದ ಹಣ ಹೊಂದಿಸಲು ಮಾದಕ ವಸ್ತು ಸಾಗಿಸಿದ ಪ್ರಿಯತಮೆ ನಾಗ ಸೌಮ್ಯಳನ್ನು ಆಂಧ್ರಪ್ರದೇಶ ಪೊಲೀಸರು ವಿಜಯವಾಡದಲ್ಲಿ ಬಂಧಿಸಿದ್ದಾರೆ.
3 ತಿಂಗಳ ಹಿಂದೆ ಚಿತ್ತೂರಲ್ಲಿ ಮಾದಕವಸ್ತು ಪ್ರಕರಣದಲ್ಲಿ ನಾಗ ಸೌಮ್ಯಳ ಪ್ರಿಯಕರನ ಬಂಧನವಾಗಿತ್ತು. ಆತನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಲು ಹಣ ಬೇಕಿದರಿಂದ ನಾಗ ಸೌಮ್ಯ ಬೆಂಗಳೂರಿನಿಂದ ವಿಜಯವಾಡಕ್ಕೆ 110 ಗ್ರಾಂ ಎಂಡಿಎಂಎ ಮಾತ್ರೆ ಸಾಗಿಸಲು ಒಪ್ಪಿಕೊಂಡಳು. ಬಶೀರ್ ಎಂಬಾತ ಈ ಕೆಲಸಕ್ಕಾಗಿ ಆಕೆಗೆ 50,000 ರು. ನೀಡುವ ಆಮಿಷ ಒಡ್ಡಿದ್ದ. ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು, ವಿಜಯವಾಡ ರೈಲು ನಿಲ್ದಾಣದಲ್ಲಿ ಕಣ್ಣಾವಲು ಇರಿಸಿದ್ದ ಪೊಲೀಸರು, ನಾಗಸೌಮ್ಯಳನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಬಳಿಕ ಬಶೀರ್ನನ್ನೂ ಬಂಧಿಸಲಾಗಿದೆ.






