ಯುವಜನ

ನಿದ್ರೆಯಲ್ಲೇ ಹಠಾತ್ ಹೃದಯಾಘಾತ: ಯುವತಿ ಸಾವು 

Views: 39

ಕನ್ನಡ ಕರಾವಳಿ ಸುದ್ದಿ:  29 ವರ್ಷದ ಯುವತಿ ನಿದ್ರೆಯಲ್ಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ನಗರದ ನೆಲ್ಲಿಕಂಜೆ ನಿವಾಸಿ, ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಸೈಬುನ್ನೀಸಾ ಹಾಗೂ ಹನೀಫಾ ದಂಪತಿಯ ಪುತ್ರಿ ತನ್ಸಿಯಾ ಮೃತ ದುರ್ದೈವಿ.

ಸಾಮಾನ್ಯ ದಿನದಂತೆ ಮಕ್ಕಳನ್ನು ಮದ್ರಸಾಕ್ಕೆ ಕಳುಹಿಸಲು ಕುಟುಂಬಸ್ಥರು ಬೆಳಿಗ್ಗೆ ಎಬ್ಬಿಸಲು ತೆರಳಿದಾಗ ಆಕೆ ಸ್ಪಂದಿಸಲಿಲ್ಲ. ತಕ್ಷಣ ವೈದ್ಯರನ್ನು ಮನೆಗೆ ಕರೆಸಿ ತಪಾಸಣೆ ನಡೆಸಿದಾಗ, ಆಕೆ ಈಗಾಗಲೇ ಕೊನೆಯುಸಿರೆಳೆದಿರುವುದು ದೃಢಪಟ್ಟಿತು. ನಿದ್ರಿಸುತ್ತಿದ್ದಂತೆಯೇ ಸಂಭವಿಸಿದ ಹಠಾತ್ ಹೃದಯಾಘಾತವೇ ಈ ಸಾವಿಗೆ ಪ್ರಮುಖ ಕಾರಣವೆಂದು ವೈದ್ಯರು ಶಂಕಿಸಿದ್ದಾರೆ.

Related Articles

Back to top button
error: Content is protected !!