ಯುವಜನ

ಲಿವ್ ಇನ್‌ ರಿಲೇಶನ್‌ಶಿಪ್ ನಲ್ಲಿದ್ದ ಪ್ರೇಮಿಗಳು..! ಅನುಮಾನಕ್ಕೆ ಬಲಿಯಾದಳು ಪ್ರೇಯಸಿ 

Views: 0

ಕನ್ನಡ ಕರಾವಳಿ ಸುದ್ದಿ: ಪ್ರೇಯಸಿಯನ್ನು ಆಕೆಯ ಪ್ರಿಯತಮನೇ ಥಳಿಸಿ ಕೊಂದು ಮೃತದೇಹದ ಪಕ್ಕದಲ್ಲೇ ರಾತ್ರಿ ಪೂರ್ತಿ ಕುಳಿತಿದ್ದ ಘಟನೆ ಪುಣೆಯಲ್ಲಿ ನಡೆದಿದೆ.

ಮೂರು ವರ್ಷಗಳಿಗೂ ಹೆಚ್ಚು ಕಾಲ ಪ್ರೀತಿ, ಡೇಟಿಂಗ್, ಜೊತೆಗೆ ಮದುವೆಯಾಗುವ ಕನಸು. ಆದರೆ, ಈ ಪ್ರೀತಿಯ ಕೊನೆಯಾಗಿದ್ದು ಮಾತ್ರ ಪ್ರೇಯಸಿಯ ಸಾವಿನಿನಲ್ಲಿ

ಕೋಮಲ್ ದಹಲೆ ಕೊಲೆಯಾದ ದುರ್ದೈವಿ. ಶುಭಮ್ ಜ್ಞಾನೇಶ್ವರ್ ಕಲ್ಬಂಡೆ ಕೊಲೆ ಆರೋಪಿಯಾಗಿದ್ದಾನೆ. ಇಬ್ಬರೂ ಕೂಡ ಸಾಫ್ಟ್‌ವೇ‌ರ್ ಎಂಜಿನಿಯರ್‌ಗಳಾಗಿದ್ದು, ಮೂರು ವರ್ಷಗಳಿಗೂ ಹೆಚ್ಚು ಕಾಲ ಲಿವ್ ಇನ್‌ ರಿಲೇಶನ್‌ಶಿಪ್’ನಲ್ಲಿದ್ದು, ಇಬ್ಬರೂ ಮದುವೆಯಾಗಲು ಯೋಜಿಸಿದ್ದರು.

ಕೋಮಲ್ ಮತ್ತು ಶುಭಮ್ ಬೇರೆ ಬೇರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಿಲೇಶನ್‌ಶಿಪ್’ನಲ್ಲಿದ್ದರು. ಪ್ರೀತಿಯ ವಿಚಾರ ಇಬ್ಬರ ಕುಟುಂಬಗಳಿಗೂ ತಿಳಿದಿತ್ತು. ಜೊತೆಗೆ ಮದುವೆಗೂ ಒಪ್ಪಿಕೊಂಡಿದ್ದರು.

ಆದರೆ, ಇತ್ತೀಚೆಗೆ ಶುಭಮ್‌ಗೆ ಬೇರೆ ಸಂಬಂಧವಿದೆ ಎಂದು ಕೋಮಲ್ ಅನುಮಾನ ವ್ಯಕ್ತಪಡಿಸಿದ್ದಳು. ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಘಟನೆ ದಿನ ಕೂಡ ಇದೇ ವಿಚಾರಕ್ಕೆ ನಡೆದ ಗಲಾಟೆ ವೇಳೆ ಆರೋಪಿಯು, ಕೋಮಲ್ ಹಲ್ಲೆ ನಡೆಸಿ, ತಲೆ ಮತ್ತು ಕುತ್ತಿಗೆಗೆ ಒದ್ದು, ಹೊಡೆದಿದ್ದು, ಆಕೆ ಸಾವನ್ನಪ್ಪಿದ್ದಳು.

ಬಳಿಕ ರಾತ್ರಿಯಿಡೀ ದೇಹದ ಪಕ್ಕದಲ್ಲಿ ಕುಳಿದಿದ್ದ ಶುಭಮ್, ಬೆಳಿಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಮಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!