70 ಅಡಿ ಆಳದ ಬಾವಿಗೆ ಬಿದ್ದ ಟ್ರ್ಯಾಕ್ಟರ್: ತಂದೆ-ಮಗ ದುರ್ಮರಣ
Views: 0
ಕನ್ನಡ ಕರಾವಳಿ ಸುದ್ದಿ: ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ 70 ಅಡಿ ಆಳದ ಬಾವಿಗೆ ಬಿದ್ದ ಪರಿಣಾಮ ತಂದೆ – ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಹಟ್ನಾ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಯಾದವ್ (35) ಮತ್ತು ಅವರ 10 ವರ್ಷದ ಮಗ ದುರ್ಗೇಶ್ ಯಾದವ್ ಮೃತರು.
“ತನ್ನ ತಂದೆ ಮತ್ತು ಸಹೋದರ ಟ್ರಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಬಾವಿಗೆ ಬಿತ್ತು” ಎಂದು 12 ವರ್ಷದ ಮಗಳು ತಿಳಿಸಿದ್ದಾಳೆ.
ಟ್ರ್ಯಾಕ್ಟರ್ ಬಾವಿಗೆ ಬಿದ್ದ ತಕ್ಷಣ ಬಾಲಕಿ ಕಿರುಚುತ್ತಲೇ ಓಡಿಹೋಗಿ ತನ್ನ ಚಿಕ್ಕಪ್ಪ ಮತ್ತು ಇತರ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಳು. ವಿಷಯ ತಿಳಿಯುತ್ತಿದ್ದಂತೆ ಜನರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರಾದರೂ, ಅಷ್ಟರಲ್ಲಾಗಲೇ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದರು. ಬಾವಿಯ ಆಳ ಮತ್ತು ಅದರಲ್ಲಿ ತುಂಬಿದ್ದ ನೀರು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ತಡ ರಾತ್ರಿಯವರೆಗೂ ನಡೆದ ಕಾರ್ಯಾಚರಣೆಯ ನಂತರ, ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಯಿತು. ಬಳಿಕ ಟ್ರ್ಯಾಕ್ಟರ್ ಅನ್ನು ಸಹ ಮೇಲಕ್ಕೆತ್ತಲಾಯಿತು.






