ಸಾಂಸ್ಕೃತಿಕ

ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್- ಐಶ್ವರ್ಯ ಬಿಗ್‌ಬಾಸ್ ಜೋಡಿ

Views: 9

ಕನ್ನಡ ಕರಾವಳಿ ಸುದ್ದಿ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೂಲಕ ಪರಿಚಯವಾದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಶಿಂಧೋಗಿ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ಶಿಶಿರ್ ಮತ್ತು ಐಶ್ವರ್ಯ, ಕಾರ್ಯಕ್ರಮದ ಬಳಿಕವೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದರು. ಒಟ್ಟಿಗೆ ಕೆಲಸ ಮಾಡುವ ಸಂದರ್ಭಗಳಲ್ಲಿ ಆರಂಭವಾದ ಪರಿಚಯ ಇಬ್ಬರ ನಡುವೆ ಸ್ನೇಹ ಬೆಳೆಸಿತ್ತು. ಕಾಲ ಕಳೆದಂತೆ ಪರಸ್ಪರ ಗೌರವ, ಕಾಳಜಿ ಹೆಚ್ಚಾಗಿ ಅದು ಪ್ರೀತಿಗೆ ತಿರುಗಿದೆ. ಇದೀಗ ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ದಾಂಪತ್ಯ ಜೀವನದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ನಿಶ್ಚಿತಾರ್ಥದ ಸಂಭ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್ ಶಾಸ್ತ್ರಿ, ತಮ್ಮ ಪ್ರೇಮಕಥೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಮ್ಮ ಜರ್ನಿ ಪ್ರೀತಿಯಿಂದ ಆರಂಭವಾಗಿರಲಿಲ್ಲ. ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ ಬದಲಾಯಿತು. ಸ್ನೇಹದ ನಡುವೆ ಪರಸ್ಪರ ಗೌರವ ಹೆಚ್ಚಾಯಿತು. ನಂತರ ಅದು ಪ್ರೀತಿಗೆ ತಿರುಗಿತು ಎಂದು ವಿವರಿಸಿದ್ದಾರೆ.

ಆರಂಭದಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗುತ್ತೇವೆ ಎಂದು ಅಂದುಕೊಂಡಿರಲಿಲ್ಲವಂತೆ. ಅಷ್ಟೇ ಅಲ್ಲ, ಬಿಗ್‌ಬಾಸ್ ಮನೆಯಲ್ಲಿಯೇ ತಮ್ಮ ನಡುವೆ ಪ್ರೀತಿ ಹುಟ್ಟಿರಲಿಲ್ಲ ಎಂಬುದನ್ನೂ ಶಿಶಿರ್ ಸ್ಪಷ್ಟಪಡಿಸಿದ್ದಾರೆ. ಐಶ್ವರ್ಯ ಬಗ್ಗೆ ಆರಂಭದಿಂದಲೂ ವಿಶೇಷ ಭಾವನೆ ಇತ್ತು. ಆದರೆ ಆ ಭಾವನೆ ಪ್ರೀತಿಯಾಗಿ ಬದಲಾಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ತಮ್ಮ ಪ್ರೇಮಕಥೆಯ ಮತ್ತೊಂದು ಕುತೂಹಲಕಾರಿ ವಿಚಾರವನ್ನೂ ಶಿಶಿರ್ ಬಹಿರಂಗಪಡಿಸಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

 

Related Articles

Back to top button
error: Content is protected !!