ಹಟ್ಟಿಯಂಗಡಿ ಯಕ್ಷಗಾನ ಮೇಳದ ಪ್ರಥಮ ಸೇವೆಯಲ್ಲಿ ಕಲಾವಿದರನ್ನು ಸೃಷ್ಟಿಸಿದ ಜಾದುಗಾರ್ ಪ್ರಕಾಶ್ ಹೆಮ್ಮಾಡಿ!
Views: 92
ಮಾರಣಕಟ್ಟೆಯು ಯಕ್ಷಗಾನ ಪೋಷಕರಾದ ಶ್ರೀ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮ ಉದ್ಘಾಟಿಸಿದರು.ವೇ.ಮೂ.ಹೆಚ್.ಬಾಲಚಂದ್ರ ಭಟ್, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೇಳದ ಯಜಮಾನರಾದ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಲೋಖನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕರುಣಾಕರ ಶೆಟ್ಟಿ, ಶ್ರೀ ಎಂ.ಎಲ್ ಭಟ್ ಮರವಂತೆ (ಸಾಗರ), ಹಿರಿಯ ಸೃಜನಶೀಲ ಯಕ್ಷಗಾನ ವಿಮರ್ಶಕರು, ಶ್ರೀ ವಾಸುದೇವ ಐತಾಳ್ ನಾಗೂರು, ಉದ್ಯಮಿಗಳು, ಬೆಂಗಳೂರು, ಶ್ರೀ ಎಸ್.ಕೆ.ಚಂದ್ರ, ಪಿ.ಡಬ್ಲ್ಯೂಡಿ ಕಾಂಟ್ರಾಕ್ಟರ್, ಸಾಗರ, ಶ್ರೀ ರತ್ನಾಕರ ಶೆಟ್ಟಿ ಹೊಸೂರು, ಉದ್ಯಮಿ ಮುಂಬಯಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥ ಉಡುಪ, ಪ್ರಧಾನ ಅರ್ಚಕರು, ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಶ್ರೀ ಪ್ರಕಾಶ್ ಹೆಮ್ಮಾಡಿ, ಅಂತರಾಷ್ಟ್ರೀಯ ಜಾದೂ ಕಲಾವಿದರು ಶ್ರೀ ಕರುಣಾಕರ ಬಳ್ಳೂರು, ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶ್ರೀ ಪಾಂಡಮಾಶ್ವಮೇಧ ಯಕ್ಷಗಾನ ಪ್ರದರ್ಶನ ನಡೆಯಿತು.








