ನಟ ಪವನ್ ಕಲ್ಯಾಣ್ 13 ವರ್ಷಗಳ ದಾಂಪತ್ಯ ನಡೆಸಿ 3ನೇ ಹೆಂಡತಿಗೆ ಡೈವೋರ್ಸ್
Views: 28
ಕನ್ನಡ ಕರಾವಳಿ ಸುದ್ದಿ: ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ಹಾಗೂ ಅನ್ನಾ ಕೊನಿಡೆಲಾ ತಮ್ಮ 13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಹಾಗೂ ಗೌರವದೊಂದಿಗೆ ದೂರವಾಗುತ್ತಿದ್ದೇವೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಇಬ್ಬರೂ ಜಂಟಿ ಹೇಳಿಕೆಯನ್ನು ರಿಲೀಸ್ ಮಾಡಿದ್ದು, ಅನ್ಯೂನ್ಯವಾಗಿದ್ದ ದಂಪತಿಗೆ ಏನಾಯ್ತು ಎನ್ನುವ ಚರ್ಚೆ ಆರಂಭವಾಗಿದೆ. ಡಿಸಿಎಂ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಪವನ್ ಕಲ್ಯಾಣ್ ಹಾಗೂ ಅನ್ನಾ ಅವರು ಪರಸ್ಪರ ಗೌರವದಿಂದ ದೂರವಾಗಿದ್ದಾರೆ ಎಂದು ಹೇಳಲಾಗಿದೆ.
ನಮ್ಮ ಜೀವನದ ಮಹತ್ವದ ಸಮಯವನ್ನ ಒಟ್ಟಿಗೆ ಕಳೆದ ಬಳಿಕ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಹಾಗೂ ನಮ್ಮ ಮಕ್ಕಳಿಗೆ ಸಮರ್ಪಿತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಮೊದಲ ಆದ್ಯತೆಯಾಗಿರಲಿದೆ ಎಂದಿದ್ದಾರೆ.
ಇದು ವೈಯಕ್ತಿಕ ವಿಷಯವಾಗಿದ್ದು, ಈ ವಿಷಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಅನ್ನಾ ಮೂರನೇ ಪತ್ನಿಯಾಗಿದ್ದರು. 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು, ಅವರ ಜೊತೆ ಡಿವೋರ್ಸ್ ಬಳಿಕ 2009ರಲ್ಲಿ ಮಾಡೆಲ್ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ತದನಂತರ 2013ರಲ್ಲಿ ಅನ್ನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.






