ವಿಜಯೇಂದ್ರ ಅಧಿಕಾರವಧಿ ಪೂರ್ಣ, ಬಿಜೆಪಿ ಆಂತರಿಕ ಗೊಂದಲಕ್ಕೆ “ಶೀಘ್ರವೇ ರಾಜ್ಯಾಧ್ಯಕ್ಷರ ಬದಲಾವಣೆ”?
Views: 0
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇಂದು ಮೂರು ವರ್ಷ ಪೂರ್ಣಗೊಳಿಸಲಿದ್ದು, ಬದಲಾವಣೆಯೋ, ಮುಂದುವರಿಕೆಯೋ ಎಂಬ ಪ್ರಶ್ನೆಗೆ ವರಿಷ್ಠರಿಂದ ಈಗ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಗೊಂದಲಕ್ಕೆ ತೆರೆ ಕಾಣಲಿದೆಯೇ?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಉಭಯ ಸದನದ ವಿಪಕ್ಷ ನಾಯಕ ಸ್ಥಾನಕ್ಕೆ ಯಾರನ್ನೂ ನೇಮಿಸದೇ ಸುಮಾರು 6 ತಿಂಗಳು ಕಾಲ ಬಿಜೆಪಿ ವರಿಷ್ಠರು ರಾಜ್ಯ ನಾಯಕರನ್ನು ಸತಾಯಿಸಿತ್ತು. ಕೊನೆಗೂ ಯಡಿಯೂರಪ್ಪ ಅವರ ಹಠಕ್ಕೆ ಮಣಿದು ವರಿಷ್ಠರು ವಿಜಯೇಂದ್ರ ಹೆಸರನ್ನು ಘೋಷಣೆ ಮಾಡಿದ್ದರು. ಆದರೆ ಈ ನೇಮಕದ ಬಳಿಕವೂ ಬಿಜೆಪಿಯಲ್ಲಿನ ಆಂತರಿಕ ಗೊಂದಲಗಳು ಮುಂದುವರಿದುಕೊಂಡೇ ಬಂದಿದೆ.
ಈ ನಡುವೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ನಡುವಿನ ನಿತ್ಯ ತಿಕ್ಕಾಟದಲ್ಲಿ ಲಾಭ ಪಡೆಯಲು ಬಿಜೆಪಿಗೆ ಅವಕಾಶವಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಆಡಳಿತ ಪಕ್ಷ, ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಈ ಎಲ್ಲ ಸ್ಥಿತ್ಯಂತರದ ಲಾಭ ಪಡೆಯಬೇಕಾಗಿದ್ದ ಬಿಜೆಪಿ ಗುಂಪುಗಾರಿಕೆಗೆ ಇತಿಶ್ರೀ ಹಾಡಿಲ್ಲ. ರಾಜ್ಯ ನಾಯಕರಲ್ಲಿ ಮೂಡಿರುವ ಈ ಗೊಂದಲಗಳನ್ನು ಪಕ್ಷದ ವರಿಷ್ಠರು ಕೂತು ಬಗೆಹರಿಸಿದ್ದರೆ, ಈ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಭಿನ್ನರಾಗ ಶುರುವಾದ ದಿನದಿಂದ ಈ ವಿಷಯದಲ್ಲಿ ದೆಹಲಿ ನಾಯಕರ ‘ಮೌನ’ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸರಣಿ ದೂರುಗಳು ಹೋದರೆ ‘ನೋಡೋಣ’ ಎನ್ನುವ ಮಾತನ್ನು ಹೇಳಿ ಸಾಗಿಹಾಕುತ್ತಿರುವುದು ಈ ಸಮಸ್ಯೆ ಮತ್ತಷ್ಟು ಬಿಗಡಲಾಯಿಸಲು ಕಾರಣವಾಗಿದೆ.
ರಾಜ್ಯ ಬಿಜೆಪಿಯಲ್ಲಿನ ಗೊಂದಲ ಇಷ್ಟಕ್ಕೆ ಸೀಮಿತವಾಗದೇ ಕಳೆದ ಆರು ತಿಂಗಳುಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಸುದ್ದಿ ಓಡಾಡುತ್ತಿದೆ. ಈ ಸುದ್ದಿಗೆ ಪೂರಕವಾಗಿ ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಅಧಿಕೃತ ಪತ್ರವನ್ನು ಬಿಜೆಪಿ ವರಿಷ್ಠರು ನೀಡಿಲ್ಲ. ಈ ಗೊಂದಲಕ್ಕೆ ತುಪ್ಪ ಸುರಿಯುವಂತೆ ದೆಹಲಿ ಹೋಗಿಬರುವ ನಾಯಕರೆಲ್ಲ, ‘ಶೀಘ್ರವೇ ರಾಜ್ಯಾಧ್ಯಕ್ಷರ ಬದಲಾವಣೆ’ ಎಂದರೆ, ವಿಜಯೇಂದ್ರ ಕಡೆಯವರು ‘ಬದಲಾವಣೆ’ ಇಲ್ಲವೆಂದು ವರಿಷ್ಠರು ಭರವಸೆ ನೀಡಿದ್ದಾರೆ. ಇಂದು ಅಥವಾ ನಾಳೆ ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಲಿದೆ’ ಎನ್ನುವ ಮಾತುಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಎರಡೂ ಬಣದ ಈ ಮಾತಿನಿಂದ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿರುವುದು ಸುಳ್ಳಲ್ಲ.
ರಾಜ್ಯ ಬಿಜೆಪಿಯಲ್ಲಿನ ಸ್ಥಿತಿಯ ಲಾಭ ಸಿಗುತ್ತಿರುವುದು ಮಾತ್ರ ಕಾಂಗ್ರೆಸಿಗರಿಗೆ ಎಂದರೆ ತಪ್ಪಾಗುವುದಿಲ್ಲ. ಆದ್ದರಿಂದ 2028ಕ್ಕೆ ಮತ್ತೊಮ್ಮೆ ಕಮಲವನ್ನು ರಾಜ್ಯವನ್ನು ಅರಳಿಸಬೇಕು ಎನ್ನುವ ಆಲೋಚನೆಯಲ್ಲಿರುವ ಬಿಜೆಪಿ ವರಿಷ್ಠರನ್ನು ಇನ್ನಾದರೂ ರಾಜ್ಯ ಬಿಜೆಪಿಯ ಪ್ರಮುಖರನ್ನು ಕೂರಿಸಿಕೊಂಡು ‘ಮಿಸ್ಸಿಂಗ್ ಲಿಂಕ್’ನ್ನು ಜೋಡಿಸುವ ಕೆಲಸಕ್ಕೆ ಕೈಹಾಕಬೇಕಿದೆ.
ಇಂತಹ ಸೂಕ್ಷ್ಮ ವಿಷಯಗಳನ್ನು ಕೊನೆಕ್ಷಣದಲ್ಲಿ ಸರಿಪಡಿಸಲು ಹೋದರೆ ಲಾಭಕ್ಕಿಂತ ನಷ್ಟವೇ ಹೆಚ್ಚು






