ಸಾಂಸ್ಕೃತಿಕ

ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ಬಿಗ್ ಬಾಸ್ ಮನೆಯಿಂದ ಔಟ್! 

Views: 52

ಕನ್ನಡ ಕರಾವಳಿ ಸುದ್ದಿ: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರೋಚಕ ಘಟ್ಟ ತಲುಪಿದ್ದು, ಈ ವಾರದ ಎಲಿಮಿನೇಷನ್‌ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಸೋನಿಕಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಮೂರನೇ ವಾರದ ಅಂತ್ಯದಲ್ಲಿ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದ ಸೋನಿಕಾ, ಬರೋಬ್ಬರಿ 49 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡು ಇದೀಗ ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ವೋಟಿಂಗ್ ಟ್ರೆಂಡ್‌ಗಳ ಲೆಕ್ಕಾಚಾರದಂತೆಯೇ ಸೋನಿಕಾ ಎಲಿಮಿನೇಟ್ ಆಗಿದ್ದಾರೆ.

ಈ ವಾರ ಆಸಿಯಾ, ಗಾನವಿ, ಧನುಷ್, ಜಗದೀಶ್, ಪ್ರಶಾಂತ್ ಹಾಗೂ ಸೋನಿಕಾ ನಾಮಿನೇಟ್ ಆಗಿದ್ದರು. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಇತರರನ್ನು ಸೇಫ್ ಮಾಡಿದ ಬಳಿಕ, ಅಂತಿಮವಾಗಿ ಸೋನಿಕಾ, ಜಗದೀಶ್ ಮತ್ತು ಪ್ರಶಾಂತ್ ಡೇಂಜರ್ ಝೋನ್‌ನಲ್ಲಿ ಉಳಿದುಕೊಂಡರು. ಮುಖ್ಯ ದ್ವಾರದ ಬಳಿ ದಟ್ಟ ಹೊಗೆ ಆವರಿಸಿದ ವೇಳೆ ಸೋನಿಕಾ ಮನೆಯಿಂದ ನಿರ್ಗಮಿಸಿದ್ದನ್ನು ಸುದೀಪ್ ಅಧಿಕೃತವಾಗಿ ಘೋಷಿಸಿದರು.

ಆರಂಭದಿಂದಲೂ ಮನೆಯಲ್ಲಿ ಹೆಚ್ಚು ಸೈಲೆಂಟ್ ಆಗಿಯೇ ಇದ್ದ ಸೋನಿಕಾ, ತಮ್ಮ ನಿಜವಾದ ವ್ಯಕ್ತಿತ್ವವನ್ನು ತೆರೆದಿಡಲು ಹಿಂದೇಟು ಹಾಕಿದ್ದರು. ಇತ್ತೀಚಿನ ದಿನಗಳಲ್ಲಿ ತುಸು ಸಕ್ರಿಯರಾಗಿ ಮಾತನಾಡಲು ಶುರುಮಾಡಿದ್ದರೂ ಕಡಿಮೆ ಮತಗಳ ಕಾರಣ ಹೊರಬರಬೇಕಾಯಿತು. ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡಿದ ಸೋನಿಕಾ, “ನಾನು ಹೆಚ್ಚು ಮಾತನಾಡದೇ ಇದ್ದಿದ್ದೇ ನನಗೆ ಮುಳುವಾಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!