ಕೃಷಿ

ರೈತರಿಗೆ ಗುಡ್‌ ನ್ಯೂಸ್‌..! ಜಮಾ ಆಗಲಿದೆ ಪಿಎಂ ಕಿಸಾನ್‌ ಯೋಜನೆ 2000 ರೂ.

Views: 15

ಕನ್ನಡ ಕರಾವಳಿ ಸುದ್ದಿ: ಪಿಎಂ ಕಿಸಾನ್‌ ಯೋಜನೆಯ 23ನೇ ಕಂತಿನ 2000 ರೂ. ಹಣ ಯಾವಾಗ ಬಿಡುಗಡೆಯಾಗುತ್ತೆ ಎಂಬುದೇ ರೈತರ ಪ್ರಶ್ನೆಯಾಗಿತ್ತು. ಇದೀಗ ಕೊನೆಗೂ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೇ ಜೂನ್‌ 20, 2026ರಂದು 2000 ರೂ. ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದೆ.

ದೇಶಾದ್ಯಂತ ಸುಮಾರು 10 ಕೋಟಿ ರೈತರು ಕಾಯುತ್ತಿದ್ದ ದಿನ ಕೊನೆಗೂ ಬಂದೇ ಬಿಡ್ತು. ಜೂನ್ 20 ರಂದು, ಅರ್ಹ ರೈತರ ಖಾತೆಗಳಿಗೆ ತಲಾ 2,000 ರೂ.ಗಳು ಜಮಾ ಆಗುವುದಾಗಿ ತಿಳಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಣ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 

ಪಿಎಂ ಕಿಸಾನ್‌ ನಿಧಿ ಸ್ಥಿತಿಯನ್ನು ಹೀಗೆ ಚೆಕ್‌ ಮಾಡಿ:

ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆನ್‌ಲೈನ್‌ನಲ್ಲಿ ಈಸಿಯಾಗಿ ಚೆಕ್‌ ಮಾಡಬಹುದು.

ಮೊದಲಿಗೆ, PM Kisan pmkisan.gov.in ನ ಅಧಿಕೃತ ಪೋರ್ಟಲ್‌ಗೆ ಓಪನ್‌ ಮಾಡಿ.

ಇಲ್ಲಿ “Know Your Status” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಆಡ್‌ ಮಾಡಬೇಕು.

ಇದರ ನಂತರ, ನೋಂದಾಯಿತ ಮೊಬೈಲ್‌ಗೆ OTP ಬರುತ್ತದೆ, ಅದನ್ನು ನಮೂದಿಸಿ, ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

Related Articles

Back to top button
error: Content is protected !!