ಯುವಜನ

ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ…ಆಂಟಿ ಸಿಗದಿದ್ದಕ್ಕೆ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

Views: 0

ಕನ್ನಡ ಕರಾವಳಿ ಸುದ್ದಿ: ಪ್ರೀತಿಯ ವಿಚಾರವಾಗಿ ದುಡುಕಿ ಯುವಕನೊಬ್ಬ ನಡು ರಸ್ತೆ ಮಧ್ಯೆದಲ್ಲೇ ತನ್ನ ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಮೃತ ಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ.

ಮೃತ ಯುವಕನನ್ನು ಆಂಧ್ರ ಪ್ರದೇಶದ ಹಿಂದೂಪುರ ಮೂಲದ 28 ವರ್ಷದ ಪವನ್‌ ಎಂದು ಗುರುತಿಸಲಾಗಿದೆ.

ಈತನು ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎರಡು ಮಕ್ಕಳ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಘಟನೆ ಹಿನ್ನಲೆ: ಮಾಹಿತಿ ಪ್ರಕಾರ, ಮದುವೆಯಾಗಿ ಮಕ್ಕಳಿದ್ದ ಮಹಿಳೆಯೊಬ್ಬಳು ಕೌಟುಂಬಿಕ ಕಾರಣಗಳಿಂದಾಗಿ ತನ್ನ ಪತಿಯಿಂದ ದೂರವಾಗಿ ಮಾದನಾಯಕನಹಳ್ಳಿಯ ಹನುಮಂತೇಗೌಡ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಪವನ್‌ ಹಾಗೂ ಮಹಿಳೆಯ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಬಳಿಕ ಯುವಕ ಪ್ರೀತಿಯಲ್ಲಿ ಬಿದ್ದಿದ್ದು ಆಂಟಿ ಪ್ರೀತ್ಸೆ ಎಂದು ಮಹಿಳೆ ಹಿಂದೆ ಬಿದ್ದಿದ್ದ.

ಆದರೆ ಕಳೆದ ಕೆಲ ದಿನಗಳಿಂದ ಮಹಿಳೆ ಪವನ್‌ನ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದರು.ಮಹಿಳೆ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಮನನೊಂದು ಆಕೆಯನ್ನು ಹುಡುಕಿಕೊಂಡು ಯುವಕ ಪವನ್‌ ಮಾದನಾಯಕನಹಳ್ಳಿಗೆ ಬಂದಿದ್ದ. ಆದರೆ ಆತನ ಪ್ರಯತ್ನ ವ್ಯರ್ಥವಾಗಿತ್ತು. ಮಾದನಾಯಕನ ಹಳ್ಳಿಯಲ್ಲೂ ಕೂಡ ಆತನಿಗೆ ಮಹಿಳೆ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ಮನನೊಂದ ಪವನ್ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾನೆ.‌ ಹನುಮಂತೇಗೌಡ ಪಾಳ್ಯದ ರಸ್ತೆ ಮಧ್ಯೆದಲ್ಲೇ ಪವನ್‌ ಮೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿ ಮೈ ತುಂಬಾ ಆವರಿಸಿದ್ದು, ತೀವ್ರ ಸುಟ್ಟ ಗಾಯಗಳಿಂದ ನೋವು ತಾಳಲಾರದೇ ಪವನ್‌ ರಸ್ತೆಯಲ್ಲೇ ನರಳಾಡುತ್ತಾ ಚೀರಾಡುತ್ತಾ ಓಡಾಡಿದ್ದಾನೆ. ಈ ಭೀಕರ ದೃಶ್ಯ ಕಂಡ ಸ್ಥಳೀಯರು ತಕ್ಷಣ ಧಾವಿಸಿ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಪೊಲೀಸರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಪವನ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆಂಬ್ಯುಲೆನ್ಸ್‌ನಲ್ಲಿ ಪವನ್‌ ಉಸಿರು ಚೆಲ್ಲಿದ್ದಾನೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!