ಇತರೆ

ಕೋಟೇಶ್ವರ: ಕೆಲಸ ಹುಡುಕಿಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಯುವಕನ ಶವ ಬಾವಿಯಲ್ಲಿ ಪತ್ತೆ 

Views: 0

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಹಾಲು ಡೈರಿ ಸಮೀಪ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ರಾಜಸ್ತಾನ ಮೂಲದ ಗೌರವ್ (19) ಬಾವಿಯಲ್ಲಿ ಶವ ಪತ್ತೆಯಾಗಿದೆ.

ವಾರದ ಹಿಂದೆ ಕೆಲಸ ಹುಡುಕಿಕೊಂಡು ರಾಜಸ್ತಾನದಿಂದ ಕುಂದಾಪುರಕ್ಕೆ ಬಂದಿದ್ದ ಅವರು ಕೋಟೇಶ್ವರದ ಬಾಡಿಗೆ ಮನೆಯಲ್ಲಿ ನೆಲೆಸಿರುವ ಸಂಬಂಧಿ ಅಮೃತ್‌ಸಿಂಗ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.

ನ.22ರ ರಾತ್ರಿ 11 ಗಂಟೆಯ ಬಳಿಕ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದಾಗ ಪತ್ತೆಯಾಗಿರಲಿಲ್ಲ. ಮಂಗಳವಾರ ಬಾಡಿಗೆ ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂಬಂಧಿ ನರೇಶ್ ಮಾಲಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!