ಮಾಹಿತಿ ತಂತ್ರಜ್ಞಾನ

ಇನ್ಮುಂದೆ ಅಪರಿಚಿತ ಕರೆ ಬಂದಾಗ ಆತಂಕ ಬೇಡ? ನೂತನ ವ್ಯವಸ್ಥೆ ಜಾರಿ

Views: 35

ಕನ್ನಡ ಕರಾವಳಿ ಸುದ್ದಿ: ಅಪರಿಚಿತ ಕರೆ ಬಂದಾಗ ನಾವು ಮೊಬೈಲ್ ಮುಟ್ಟೋಕೆ ಹೋಗೋದಿಲ್ಲ. ಇದು ಸ್ಕ್ಯಾಮ್ ಕಾಲ್ ಇರಬಹುದು ಎಂದು ಬಿಟ್ಟುಬಿಡುತ್ತೇವೆ. ಕೆಲವೊಮ್ಮೆ ಆತಂಕಕ್ಕೆ ಒಳಗಾಗುತ್ತೇವೆ. ಬಂದ ಅನೌನ್ ನಂಬರ್ ಯಾರದ್ದು ಎಂದು ತಿಳಿದುಕೊಳ್ಳಲು ಕೆಲವೊಮ್ಮೆ ಪರದಾಡುತ್ತೇವೆ. ಆದರೆ ಇನ್ಮುಂದೆ ಅಷ್ಟೆಲ್ಲ ಗಾಬರಿಗೊಳಗಾಗುವ ಅಗತ್ಯವಿಲ್ಲ. ನೀವು ಅನಾಮಿಕ ಕರೆಗಳನ್ನು ಸ್ವೀಕರಿಸೋದೆ ಇಲ್ಲ.

ಹೌದು, ಭಾರತ ಸರ್ಕಾರವು ಇನ್ಮುಂದೆ ಕಾಲರ್ ಐಡಿ ಕಡ್ಡಾಯಗೊಳಿಸಲು ಮುಂದಾಗಿದೆ. ದೂರಸಂಪರ್ಕ ಇಲಾಖೆಯು (DoT) ಟೆಲಿಕಾಂ ಸೇವಾ ಪೂರೈಕೆದಾರರಿಗೆ (TSP) 2026ರ ನವೆಂಬರ್ 1ರಿಂದ ಕಾಲಿಂಗ್ ನೇಮ್ ಪ್ರೆಸಂಟೇಶನ್ ಪರಿಚಯಿಸುವ ವ್ಯವಸ್ಥೆ ಜಾರಿಗೆ ತರಲು ನಿರ್ದೇಶಿಸಿದೆ,

ಕಾಲಿಂಗ್ ನೇಮ್ ಪ್ರೆಸಂಟೇಶನ್ (ಸಿಎನ್‌ಎಪಿ) ಎನ್ನುವುದು ನೆಟ್ವರ್ಕ್ ಮಟ್ಟದ ಟೆಲಿಕಾಂ ವೈಶಿಷ್ಟ್ಯವಾಗಿದ್ದು, ನಿಮ್ಮ ಮೊಬೈಲ್ಗೆ ಬರುವ ಅಪರಿಚಿತ ಸಂಖ್ಯೆಗಳ ಹೆಸರನ್ನು ನಂಬರ್ನ ಬದಲಾಗಿ ತೋರಿಸುತ್ತದೆ. ಇದು KYC-ಪರಿಶೀಲಿಸಿದ ಹೆಸರನ್ನು ಪ್ರದರ್ಶಿಸುತ್ತದೆ.

ಈಗಾಗಲೇ ಅನೌನ್ ನಂಬರ್ಗಳು ಯಾರದ್ದು ಎಂದು ಪತ್ತೆ ಹಚ್ಚಲು ಟ್ರೂ ಕಾಲರ್ ಇದೆ. ಆದರೆ, ಅದಕ್ಕೂ ಭಿನ್ನವಾಗಿ ಸಿಎನ್ಎಪಿ ಕೆಲಸ ಮಾಡುತ್ತದೆ. ಇದಕ್ಕೆ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯ ಇಲ್ಲ. 4G ಮತ್ತು 5G ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ದೂರಸಂಪರ್ಕ ಇಲಾಖೆಯ ಆದೇಶದ ಪ್ರಕಾರ, 4G ಮತ್ತು 5Gಯಂತಹ ಉನ್ನತ ತಲೆಮಾರಿನ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಪ್ರತಿ ಬಳಕೆದಾರರಿಗೆ ಕಾಲಿಂಗ್ ನೇಮ್ ಪ್ರೆಸಂಟೇಶನ್ ಅನ್ನು ಡೀಫಾಲ್ಟ್ ಆಗಿ ಸಕ್ರಿಯಗೊಳಿಸಲಾಗುತ್ತದೆ. ನಿಮಗೆ ಕರೆ ಬಂದಾಗ, ವ್ಯಕ್ತಿಯ ಹೆಸರು ಮತ್ತು ಸಂಖ್ಯೆಯನ್ನು ಕಾಲಿಂಗ್ ನೇಮ್ ಪ್ರೆಸಂಟೇಶನ್ ತೋರಿಸುತ್ತದೆ. 2G ಮತ್ತು 3G ನೆಟ್‌ವರ್ಕ್‌ಗಳು ಹಾಗೂ ಸಾರ್ವಜನಿಕ ಸ್ವಿಚ್ಡ್ ಟೆಲಿಫೋನ್ ನೆಟ್‌ವರ್ಕ್‌ಗಳಲ್ಲಿ ಇದರ ಅನುಷ್ಠಾನವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು ಎಂದಿದೆ.

ಡಿಒಟಿ ಆದೇಶದ ಪ್ರಕಾರ, ನಿಮ್ಮ ಮೊಬೈಲ್ಗೆ ಬರುವ ಕರೆಗಳು ಒಂದು ನೀವು ಈಗಾಗಲೇ ಸೇವ್ ಮಾಡಿಕೊಂಡಿರುವ ನಂಬರ್ಗಳಾದರೆ, ಮತ್ತೊಂದು ಅನೌನ್ ನಂಬರ್ಗಳ ಹೆಸರುಗಳು ಮಾತ್ರ. ನೀವು ಯಾರ ನಂಬರ್ ಸೇವ್ ಮಾಡಿಟ್ಟುಕೊಂಡಿಲ್ಲವೋ ಅವರ ಹೆಸರನ್ನು ದೇಶಿಯ ಕರೆಯಾದ್ರೆ ಟೆಲಿಕಾಂ ಆಪರೇಟರ್‌ನ ಚಂದಾದಾರರ ಡೇಟಾಬೇಸ್‌ನಲ್ಲಿ ದಾಖಲಿಸಲಾದ ಕರೆ ಮಾಡುವವರ ಹೆಸರನ್ನು ತೋರಿಸಲಾಗುತ್ತದೆ. ಅಂತರರಾಷ್ಟ್ರೀಯ ಕರೆಗಳಿಗಾಗಿ, ಪರದೆಯ ಮೇಲೆ “ಅಂತರರಾಷ್ಟ್ರೀಯ ಕರೆ ಎಂದು ಪ್ರದರ್ಶಿಸಲಾಗುತ್ತದೆ.

ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರು ಚಂದಾದಾರರ ಹೆಸರುಗಳನ್ನು ಅವರ ಸಂಖ್ಯೆಗಳೊಂದಿಗೆ ಮ್ಯಾಪಿಂಗ್ ಮಾಡುವ ಡೇಟಾಬೇಸ್ ಅನ್ನು ಸ್ಥಾಪಿಸಬೇಕು, ನಿರ್ವಹಿಸಬೇಕು ಮತ್ತು ಚಾಲನೆ ಮಾಡಬೇಕು. ಕರೆಯನ್ನು ಸ್ವೀಕರಿಸುವ ಆಪರೇಟರ್ ಈ ಡೇಟಾಬೇಸ್‌ನಿಂದ ಹೆಸರನ್ನು ಪಡೆದುಕೊಂಡು ಕರೆಯಲ್ಪಡುವ ಬಳಕೆದಾರರಿಗೆ ಪ್ರದರ್ಶಿಸುತ್ತದೆ.

ಆಪರೇಟರ್‌ಗಳು ಭದ್ರತಾ-ವಿನ್ಯಾಸದ ವಿಧಾನವನ್ನು ಅನುಸರಿಸಬೇಕು. ಇದರ ಅಡಿಯಲ್ಲಿ, ಒಳಬರುವ ಕರೆ ಮುಗಿದ ನಂತರ ಕ್ವೇರಿ-ರೆಸ್ಪಾನ್ಸ್(ವಿಚಾರಿಸಿ- ಮಾತನಾಡಿ) ಮೆಕಾನಿಸಮ್ ಮೂಲಕ ಕರೆ ಮಾಡುವವರ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ,

Related Articles

Back to top button
error: Content is protected !!