ರೋಬಾಟ್‌ನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ..? ರೋಬಾಟ್ ಮತ್ತು ಮಾಲೀಕ ವಶಕ್ಕೆ
Views: 0
ಕನ್ನಡ ಕರಾವಳಿ ಸುದ್ದಿ: ಜರ್ಮನಿಯಲ್ಲಿ ರೋಬಾಟ್‌ವೊಂದನ್ನು ಬಳಸಿಕೊಂಡು 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ, ಜರ್ಮನಿಯ ಜನನಿಬಿಡ ಪ್ರದೇಶವಾದ ಹೊಹೆನ್‌ಜೊಲ್ಲೆರ್ನ್‌ರಿಂಗ್ ನ ಫುಡ್ ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದೆ. ಆಹಾರ ಮಳಿಗೆ ಬಳಿ ಹುಡುಗಿಯೊಬ್ಬಳು ತಿಂಡಿ ತಿನ್ನಲು ಬಂದಿದ್ದಾಳೆ. ಆಗ ಈ ವಿವಾದಿತ ರೋಬಾಟ್, ಆಕೆಯ ಬಳಿ ಹೋಗಿ, ಅವಳನ್ನು ಅಸಂಬದ್ಧವಾಗಿ ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡುವಂತೆ ವರ್ತನೆ ತೋರಿದೆ. ಈ ಘಟನೆಯನ್ನು ವಿಡಿಯೋ ತೆಗೆದು ಆನ್ಲೈನ್ನಲ್ಲಿ ಹರಿಬಿಟ್ಟ ನಂತರ, ರೋಬಾಟ್‌ಗಳ ವರ್ತನೆ ಬಗ್ಗೆ ಜನರಲ್ಲಿ ಆತಂಕ ಹಾಗೂ ಕೋಪ ಇಮ್ಮುಡಿಗೊಂಡಿದೆ.
ವಿಡಿಯೋ ವೈರಲ್ ಆದ ತರುವಾಯ, ಜರ್ಮನಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆ ವಿವಾದಿತ ರೋಬಾಟ್ ಮತ್ತು ಅದರ ಮಾಲೀಕನನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ. ಆದರೆ, ಈ ರೋಬಾಟ್ ಈ ಕೆಲಸವನ್ನು ತನ್ನ ಬುದ್ಧಿಮತ್ತೆ ಬಳಸಿ ಮಾಡಿತೇ? ಅಥವಾ ಅದರ ಮಾಲೀಕ ಈ ರೀತಿ ಪ್ರೊಗ್ರಾಮಿಂಗ್ ಮಾಡಿದ್ದನೇ? ಎನ್ನುವುದು ಪೊಲೀಸ್ ತನಿಖೆ ಮೂಲಕವೇ ಹೊರಬೀಳಬೇಕಿದೆ.
ಸದ್ಯ ಪೊಲೀಸರು ಹೇಳುವ ಪ್ರಕಾರ, ನಾವು ವಶಕ್ಕೆ ತೆಗೆದುಕೊಂಡಿರುವ ರೋಬಾಟ್, ಹುಡುಗಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದೆ ಮತ್ತು ಲೈಂಗಿಕವಾಗಿ ಅವಳತ್ತ ಕೆಲ ಚಲನೆಯನ್ನು ಮಾಡಿದೆ. ಈಗ ನಾವು ಆ ರೋಬೊ ಮತ್ತು ಅದರ ಮಾಲೀಕನನ್ನು ಬಂಧಿಸಿದ್ದೆವೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ವಿವಾದಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರಿಂದ ಕಮೆಂಟ್ಗಳ ಸುರಿಮಳೆ ಸುರಿದು ಬಂದಿದೆ. ಈಗ ಕೇವಲ ಸನ್ನೆ ಮಾಡಿದೆ, ನಾಳೆ ಅತ್ಯಾಚಾರವನ್ನೇ ಮಾಡುತ್ತೆ? ಈ ತಂತ್ರಜ್ಞಾನ ನಮಗೇ ಬೇಡವೇ ಬೇಡ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ರೋಬಾಟ್‌ಗಳಿಗೆ ಸ್ವಂತ ಬುದ್ಧಿ ಇರುವುದಿಲ್ಲ. ಇದೆಲ್ಲಾ ಆ ಅಂಗಡಿ ಮಾಲೀಕನದೇ ಕಿತಾಪತಿ. ಅವನಿಗೆ ಶಿಕ್ಷೆ ನೀಡಿ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮುಂದೊಂದು ದಿನ ಈ ರೋಬಾಟ್‌ಗಳೇ ಜಗತ್ತನ್ನು ಆಳುತ್ತವೆ, ನಾವು ಮನುಷ್ಯರು ಇದರ ಮುಂದೆ ಸೋಲುತ್ತೇವೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.






