ಮಾಹಿತಿ ತಂತ್ರಜ್ಞಾನ
ಡಿಜಿಟಲ್ ಭದ್ರತೆ, ಗ್ರಾಹಕರ ಹಿತರಕ್ಷಣೆಗಾಗಿ ಜನವರಿ 1ರಿಂದಲೇ ಹೊಸ ನಿಯಮ ಜಾರಿ
Views: 7
ಕನ್ನಡ ಕರಾವಳಿ ಸುದ್ದಿ: ಮೊಬೈಲ್‌ನಲ್ಲಿ ಸಿಮ್ ಇದ್ದರೆ ಮಾತ್ರ ವಾಟ್ಸ್ಆ್ಯಪ್, ಟೆಲಿಗ್ರಾಂ ನಂತಹ ಮೆಸೇಜಿಂಗ್ ಆ್ಯಪ್‌ಗಳು ಕೆಲಸ ಮಾಡಲಿವೆ. ಈ ನಿಯಮವನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದ್ದು, 2027ರ ಜ.1ರಿಂದ ಜಾರಿಗೆ ಬರಲಿದೆ.
ಆದ್ದರಿಂದ ಡಿ.31ರೊಳಗೆ ಲೈವ್ ಸಿಮ್‌ಗಳೊಂದಿಗೆ ಖಾತೆಗಳನ್ನು ಸಂಯೋಜಿಸಲು ಮೆಸೇಜಿಂಗ್ ಪ್ಲಾಟ್ ಫಾರ್ಮ್‌ಗಳಿಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಟೆಲಿಕಾಂ ಇಲಾಖೆ ಹೊರಡಿಸಿದೆ.
ಹೆಚ್ಚುತ್ತಿರುವ ಸೈಬರ್‌ವಂಚನೆಗಳು, ಫಿಶಿಂಗ್, ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಡಿಜಿಟಲ್ ಬಳಸಿಕೊಂಡು ಅರೆಸ್ಟ್‌ನಂತಹ ವಂಚನೆಗಳನ್ನು ತಡೆಯಲು ಹಾಗೂ ಟೆಲಿಕಾಂ ಸೈಬರ್ ಭದ್ರತೆಯನ್ನು ಹೆಚ್ಚಿಸಲು ಟೆಲಿಕಾಂ ಇಲಾಖೆ ಈ ಕ್ರಮ
ತೆಗೆದುಕೊಂಡಿದೆ. ಇದು ನೋಂದಾಯಿತ ಸಿಮ್ಗಗಳಿಲ್ಲದೆ ವೈಫೈ ಮೂಲಕ ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಮ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ.
ಅದೇ ರೀತಿ ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಬಳಸುವವರು ಅಥವಾ ಆಗಾಗ್ಗೆ ತಮ್ಮ ಸಿಮ್ ಕಾರ್ಡ್‌ಗಳನ್ನು ಬದಲಾಯಿಸುವವರ ಪರಿಣಾಮ ಬೀರುತ್ತದೆ.






