ಮುಲ್ಕಿ ಸಮೀಪ ಸ್ಕೂಲ್ ಬಸ್ಗೆ ಟೂರಿಸ್ಟ್ ವಾಹನ ಡಿಕ್ಕಿ:ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
Views: 23
ಕನ್ನಡ ಕರಾವಳಿ ಸುದ್ದಿ: ಸ್ಕೂಲ್ ಬಸ್ಗೆ ಟೂರಿಸ್ಟ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ಕಮರಿಗೆ ಉರಳಿದ ಘಟನೆ ಮುಲ್ಕಿ ಸಮೀಪದ ಕೋಲ್ನಾಡುವಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.
ಕೊಲ್ನಾಡುಗುತ್ತು ಬಳಿ ಈ ಘಟನೆ ನಡೆದಿದೆ. ಮಂಗಳೂರಿನ ಕುಳಾಯಿ ಮೂಲದ ಖಾಗಿ ಶಾಲೆಯ ಬಸ್ ಅಪಘಾತಗೊಂಡಿದೆ. ಶಾಲಾ ಬಸ್ ಕೊಲ್ನಾಡುವಿನಲ್ಲಿ ಯು ಟರ್ನ್ ತೆಗೆದು ವಿದ್ಯಾರ್ಥಿನಿಯನ್ನು ಇಳಿಸಿ ಮುಂದಕ್ಕೆ ಸಾಗುವ ವೇಳೆ ಹಿಂಬದಿಯಿಂದ ಅತಿ ವೇಗದಿಂದ ಬಂದ ತಮಿಳುನಾಡು ಮೂಲದ ಟುರಿಸ್ಟ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ರಸ್ತೆ ಬದಿಯ ಕಮರಿಗೆ ಉರುಳಿದೆ.
ಶಾಲಾ ಬಸ್ನಲ್ಲಿ 17 ಮಂದಿ ವಿದ್ಯಾರ್ಥಿಗಳಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ, ಟೂರಿಸ್ಟ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಮುಕ್ಕ ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ರಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






