ಸಾಂಸ್ಕೃತಿಕ

‘ಪ್ರೇಮದ ಊರಲಿ’ ಸಕ್ಸಸ್ ನಟಿ ತಪಸ್ವಿನಿ ಪೂಣಚ್ಚ ಹೊಸ ಸಿನಿಮಾ “ಮಿಸ್ಟರ್ ಜಾಕ್’ ಬಿಡುಗಡೆಗೆ ಸಜ್ಜು

Views: 64

ಕನ್ನಡ ಕರಾವಳಿ ಸುದ್ದಿ: ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ ‘ಮಂಡಿಮನೆ ಟಾಕೀಸ್’ ಬ್ಯಾನರ್ ಅಡಿಯಲ್ಲಿ ‘ಮಿಸ್ಟರ್ ಜಾಕ್’ ಚಿತ್ರವನ್ನು ನಿರ್ಮಿಸಿದ್ದಾರೆ.

ಗುರುನಂದನ್ ಮತ್ತು ‘ಪ್ರೇಮದ ಊರಲಿ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ನಟಿಸಿರುವ ‘ಮಿಸ್ಟರ್ ಜಾಕ್’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ದಿನಾಂವನ್ನು ಖಚಿತಪಡಿಸಿದೆ. ದಸರಾ ಹಬ್ಬದ ಸಂದರ್ಭವನ್ನು ಬಳಸಿಕೊಂಡು, ಈ ಕಾಮಿಡಿ ಡ್ರಾಮಾ ಚಿತ್ರವು ಡಿಸೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ ‘ಮಂಡಿಮನೆ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಮಿಸ್ಟರ್ ಜಾಕ್’ ಚಿತ್ರವು, ನಟನ ವೃತ್ತಿಜೀವನದಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನವಾಗಿದೆ. ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ನಟ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ ಕಡೂರು ಮತ್ತು ಸುಶ್ಮಿತಾ ಜಗ್ಗಪ್ಪ ಅವರಂತಹ ಅನುಭವಿ ನಟರ ದಂಡೇ ಪೋಷಕ ಪಾತ್ರದಲ್ಲಿದ್ದಾರೆ.

ಚಿತ್ರತಂಡ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿತು; ಈ ಹಾಡಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಡಹಬ್ಬ ದಸರಾ ಸಂಭ್ರಮದಲ್ಲಿ ಚಿತ್ರತಂಡ ಅಕ್ಟೋಬರ್ 19 ರಂದು ಎರಡನೇ ಹಾಡನ್ನು ಬಿಡುಗಡೆ ಮಾಡಲಿದೆ.

Related Articles

Back to top button
error: Content is protected !!