ಸಾಂಸ್ಕೃತಿಕ

ಕನ್ನಡ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ 7 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ಅಂತ್ಯ

Views: 38

ಕನ್ನಡ ಕರಾವಳಿ ಸುದ್ದಿ: ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ನಟಿ ಐಶ್ವರ್ಯಾ ಪಿಸ್ಸೆ ಪತಿ ಹರಿ ವಿನಯ್ ಅವರೊಂದಿಗಿನ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ನಟಿ  ಸ್ಪಷ್ಟಪಡಿಸಿದ್ದಾರೆ.

ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟಿ ಐಶ್ವರ್ಯ ಪಿಸ್ಸೆ, ಕನ್ನಡದಲ್ಲಿ ‘ಸರ್ವ ಮಂಗಳ ಮಾಂಗಲ್ಯೇ’, ‘ಪುನರ್ ವಿವಾಹ’, ‘ಗಿರಿಜಾ ಕಲ್ಯಾಣ’, ‘ಸುಂದರಿ’, ‘ಅನುರೂಪ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದಲ್ಲಿ ಯಶ್ ತಂಗಿಯಾಗಿ ಅಭಿನಯಿಸಿದ್ದಾರೆ.

ಇವರು 2019ರಲ್ಲಿ ನಟಿ ನವ್ಯಾ ಸ್ವಾಮಿ ಅವರ ಸಹೋದರ ಹರಿ ವಿನಯ್ ಜತೆ ಮದುವೆಯಾಗಿದ್ದರು. ಇದೀಗ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದಾರೆ.

ತಾವು ಮತ್ತು ಹರಿ ವಿನಯ್ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಸಾಕಷ್ಟು ಚಿಂತನೆಯ ಬಳಿಕ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿರುವುದಾಗಿ ತಿಳಿಸಿದ್ದಾರೆ. ಇದು ತಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ತಮ್ಮ ಖಾಸಗಿತನ ಮತ್ತು ನೆಮ್ಮದಿಗೆ ಗೌರವ ನೀಡುವಂತೆ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದ್ದಾರೆ.

 

Related Articles

Back to top button
error: Content is protected !!