ಇತರೆ

ಪ್ರೀತಿಸಿ ಮದುವೆಯಾದ ಮಗಳಿಗೆ ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿದ ತಂದೆ

Views: 24

ಕನ್ನಡ ಕರಾವಳಿ ಸುದ್ದಿ:ತಾನು ಇಷ್ಟಪಟ್ಟ ಅನ್ಯಜಾತಿಯ ಯುವಕನನ್ನು ವಿವಾಹವಾದ ಕಾರಣಕ್ಕೆ, ಹೆತ್ತ ತಂದೆಯೇ ತನ್ನ  ಮಗಳಿಗೆ ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿ, ಆಕೆಯೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಚಂದೌಲಿ ಮೂಲದ ನೇಹಾ ಸಿಂಗ್ ಎಂಬ ಯುವತಿ, ತನ್ನಿಷ್ಟದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಆದರೆ, ಯುವಕ ಬೇರೆ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಕುಟುಂಬದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ತಂದೆ ಮಗಳಿಗೆ ಸಾಕಷ್ಟು ತಿಳಿಹೇಳಿ ಈ ಮದುವೆಗೆ ಒಪ್ಪದಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಯುವತಿ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಪ್ರೀತಿಸಿದ ಯುವಕನನ್ನೇ ವರಿಸಿದ್ದಾಳೆ.

ಇದರಿಂದ ಆಕ್ರೋಶಗೊಂಡ ಮತ್ತು ಸಮಾಜದಲ್ಲಿ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಭಾವಿಸಿದ ತಂದೆ, ಸಾಂಪ್ರದಾಯಿಕ ವಿಧಿ-ವಿಧಾನಗಳ ಮೂಲಕ ಮಗಳಿಗೆ ಪಿಂಡ ಪ್ರದಾನ ಮಾಡಿದ್ದಾರೆ. “ಇಂದಿನಿಂದ ಈಕೆ ನನ್ನ ಮಗಳಲ್ಲ, ನಮಗೆ ಸತ್ತು ಹೋಗಿದ್ದಾಳೆ” ಎಂದು ಘೋಷಿಸಿ ಮನೆಯ ಬಾಗಿಲನ್ನು ಶಾಶ್ವತವಾಗಿ ಮುಚ್ಚಿದ್ದಾರೆ.

 

 

 

Related Articles

Back to top button
error: Content is protected !!