ಇತರೆ
ಬೈಂದೂರು: ವತ್ತಿನೆಣೆಯಲ್ಲಿ ಡಿವೈಡರ್‌ಗೆ ಬೈಕ್ ಡಿಕ್ಕಿ, ಸವಾರ ಸಾವು
Views: 56
ಕನ್ನಡ ಕರಾವಳಿ ಸುದ್ದಿ: ಹೆದ್ದಾರಿ ಡಿವೈಡರ್‌ಗೆ ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ಸಮೀಪದ ವತ್ತಿನೆಣೆ ಬಳಿ ಸಂಭವಿಸಿದೆ.
ಭಟ್ಕಳ ತಾಲೂಕಿನ ಬೆಳ್ಳಿ ನಿವಾಸಿ ಉಮೇಶ ಮಂಜುನಾಥ ಮೊಗೇರ್ (43) ಮೃತಪಟ್ಟವರು.
ಮಂಜುನಾಥ ಅವರು ಪತ್ನಿ ಪದ್ಮಾ ಮೊಗೇರ್ ಜತೆಗೆ ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಬಳಿಕ ಭಟ್ಕಳದ ಮನೆಗೆ ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ.
ಪದ್ಮಾ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ ಅವರು ಮೀನುಗಾರಿಕೆ ವೃತ್ತಿ ಮಾಡುತ್ತಿದ್ದರು.
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






