ಇತರೆ

ನಕಲಿ ದಾಖಲೆ ಬಳಸಿ ಕೋಟ ಹೋಬಳಿ ಮೂಡಹಡು ಗ್ರಾಮದ ಅಕ್ರಮ ಜಮೀನು ವರ್ಗಾವಣೆ:ಐವರ ವಿರುದ್ಧ ಕ್ರಿಮಿನಲ್‌ ಪ್ರಕರಣ

Views: 20

ಕನ್ನಡ ಕರಾವಳಿ ಸುದ್ದಿ:ಬ್ರಹ್ಮಾವರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ಜಮೀನು ವರ್ಗಾವಣೆ ಮಾಡಿಸಿಕೊಂಡಿರುವ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ದಿನಾಂಕ 17/09/2026 ರಂದು ಬ್ರಹ್ಮಾವರ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜು ಸಂಖ್ಯೆ 3291/2026-27 ರಂತೆ ನೋಂದಣಿಯಾದ ಜಮೀನು ಕ್ರಯಕ್ಕೆ ಸಂಬಂಧಿಸಿದಂತೆ ಈ ಅಕ್ರಮ ಬೆಳಕಿಗೆ ಬಂದಿದೆ. ಪ್ರಕರಣದ 1ನೇ ಆರೋಪಿ ಮೊಹಮ್ಮದ್ ಶಕೀರ್ ಎಂಬಾತ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ಮೂಡಹಡು ಗ್ರಾಮದ ಜಮೀನನ್ನು 4ನೇ ಆರೋಪಿ ರಮಾ ಜೆ. ರಾವ್ ಮತ್ತು 5ನೇ ಆರೋಪಿ ಯು. ಅಭಿಷೇಕ್ ಎಂಬುವರಿಗೆ ವರ್ಗಾವಣೆ ಮಾಡಿಕೊಟ್ಟಿದ್ದನು.

ಮಾರಾಟಗಾರನಾದ 1ನೇ ಆರೋಪಿ ಮೊಹಮ್ಮದ್ ಶಕೀ‌ರ್ ನಕಲಿ ದಾಖಲೆಗಳನ್ನು ನೀಡಿ ನೋಂದಣಿಗೆ ಹಾಜರಾಗಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪುನ‌ರ್ ಪರಿಶೀಲನೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ಒದಗಿಸಿದ್ದ ಪಾಸ್‌ಪೋರ್ಟ್ ಹಾಗೂ ಪಾನ್‌ ಕಾರ್ಡ್‌ಗಳ ಬಗ್ಗೆ ಮೇಲ್ನೋಟಕ್ಕೆ ಸಂಶಯ ಬರದಿದ್ದರೂ, ನೈಜ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನೋಂದಣಿ ಸಮಯದಲ್ಲಿ ಆತನನ್ನು ಗುರುತಿಸಿದ್ದ 2ನೇ ಆರೋಪಿ ಜಿ.ವಿ. ಗಿರೀಶ್ ಉಪಾಧ್ಯ ಹಾಗೂ 3ನೇ ಆರೋಪಿ ಶ್ಯಾಮ್ ಪ್ರಸಾದ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿತ್ತು.

ಮೊಹಮ್ಮದ್ ಶಕೀ‌ರ್, ಜಿ.ವಿ. ಗಿರೀಶ್ ಉಪಾಧ್ಯ, ಶ್ಯಾಮ್ ಪ್ರಸಾದ್, ರಮಾ ಜೆ. ರಾವ್, ಯು. ಅಭಿಷೇಕ್ ಅವರ ವಿರುದ್ಧ ದೂರು ದಾಖಲಾಗಿದೆ.

 

Related Articles

Back to top button
error: Content is protected !!