ಇತರೆ

ಅನೈತಿಕ ಸಂಬಂಧ ಶಂಕಿಸಿ ಹೆಂಡತಿ ಸ್ನೇಹಿತನಿಗೆ ಆ್ಯಸಿಡ್‌ ಎರಚಿದ ಪತಿ

Views: 25

ಕನ್ನಡ ಕರಾವಳಿ ಸುದ್ದಿ: ಹೆಂಡತಿಯ ಜತೆ ಆಕೆಯ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪತಿ ಆ್ಯಸಿಡ್ ದಾಳಿ ನಡೆಸಿದ ಘಟನೆ ಬೆಂಗಳೂರು ಉತ್ತರ ತಾಲೂಕು ಬೈಯಂಡಹಳ್ಳಿಯಲ್ಲಿ ನಡೆದಿದೆ.

ಶಶಿಕುಮಾ‌ರ್ ಆ್ಯಸಿಡ್ ದಾಳಿಗೊಳಗಾದವರು.ನವೀನ್ ದಾಳಿ ನಡೆಸಿದ ಆರೋಪಿ.

ಈತ ದಾಳಿ ನಡೆಸುವಾಗ ನನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ? ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಹೇಳಿ ಆಸಿಡ್ ಎರಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಮಾದನಾಯಕನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾರ್ಮೆಂಟ್ಸ್‌ನಲ್ಲಿ ನವೀನ್ ಪತ್ನಿಗೆ ಶಶಿಕುಮಾ‌ರ್ ಪರಿಚಯವಾಗಿದ್ದ. ಶಶಿಕುಮಾರ್ ಹಾಗೂ ಪತ್ನಿ ನಡುವೆ ಅಕ್ರಮ ಸಂಬಂಧ ಶಂಕೆಯಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!