ಧಾರ್ಮಿಕ

ಆನೆಗುಡ್ಡೆ ದೇವಸ್ಥಾನದಲ್ಲಿ ಮಂದಾರ್ತಿ ಮೇಳದವರಿಂದ ಯಕ್ಷಗಾನ ಬಯಲಾಟ: ಕಲಾವಿದರಿಗೆ ಅನುಗ್ರಹ ಪ್ರಸಾದ ನೀಡಿ ಗೌರವ

Views: 25

ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವರ್ಷಂಪ್ರತಿ ಸಂಪ್ರದಾಯದಂತೆ ಸೇವಾ ರೂಪದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು.

ಪ್ರಥಮ ಸೇವೆಯಾಟ ಮಂದಾರ್ತಿ ಶ್ರೀ ಕ್ಷೇತ್ರದಲ್ಲಿ, ಎರಡನೇ ಸೇವೆಯಾಟ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹಾಗೂ ಮೂರನೆಯ ಸೇವೆಯಾಟ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುತ್ತದೆ.

ಈ ಸಂದರ್ಭದಲ್ಲಿ ಆಡಳಿತ ಮೊಕೇಸರರಾದ ಶ್ರೀ ಕೆ. ಶ್ರೀರಮಣ ಉಪಾಧ್ಯಾಯರು ಹಾಗೂ ಪರ್ಯಾಯ ಅರ್ಚಕರಾದ ಶ್ರೀ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಯಕ್ಷಗಾನ ಮಂಡಳಿ ಹಾಗೂ ಕಲಾವಿದರಿಗೆ ಶುಭ ಹಾರೈಸುವುದರೊಂದಿಗೆ ದೇವರ ವಿಶೇಷ ಪ್ರಸಾದವನ್ನು ನೀಡಿ ಗೌರವಿಸಿದರು.

Related Articles

Back to top button
error: Content is protected !!