ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ
Views: 8
ಕನ್ನಡ ಕರಾವಳಿ ಸುದ್ದಿ: ಕಾರ್ತಿಕ ಮಾಸ ಮಂಜುನಾಥನಿಗೆ ಪ್ರಿಯವಾದ ಮಾಸ ಆ ನಿಟ್ಟಿನಲ್ಲಿ ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನವೆಂಬರ್ 9 ರಿಂದ ಡಿಸೆಂಬರ್ 8 ತನಕ ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದಲ್ಲಿ ಸಾಮೂಹಿಕವಾಗಿ ದೀಪಾ ಹಚ್ಚುವ ಕಾರ್ಯಕ್ರಮವನ್ನು ವ್ಯವಸ್ಥಾಪನಾ ಸಮಿತಿಯವರು ಹಮ್ಮಿಕೊಂಡಿದಾರೆ.
ಕಾರ್ತಿಕ ಮಾಸದ ಪ್ರತಿ ಸೋಮವಾರ ಸೇವಾಕರ್ತರಿಂದ ವಿಶೇಷವಾದ ಪೂಜೆಯೊಂದಿಗೆ ದೀಪರಾಧನೆಯನ್ನು ನಡೆಸಲಾಗುತ್ತದೆ. ಕಾರ್ತಿಕ ಮಾಸದ ದೀಪರಾಧನೆ ಪೂಜೆಗೆ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಹೊಳ್ಳರು, ಪ್ರಧಾನ ಅರ್ಚಕರಾದ ಕೃಷ್ಣ ಐತಾಳರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತ್ಯರಂಜನ್ ಹೆಗ್ಡೆ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಸದಸ್ಯರುಗಳಾದ ಮಮತಾ ಶೆಟ್ಟಿ, ದೇವೇಂದ್ರ ಆಚಾರ್ಯ, ಜಯಂತಿ ಕುಲಾಲ್, ರಾಜೀವ ದೇವಾಡಿಗ, ಹಿರಿಯರಾದ ಕರುಣಾಕರ ಶೆಟ್ಟಿ, ಶಶಿಧರ್ ಶೆಟ್ಟಿ, ದಿನೇಶ್ ಶೆಟ್ಟಿ, ರಮೇಶ್ ಶೆಟ್ಟಿ, ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.









