ಧಾರ್ಮಿಕ

ಕುಂದಾಪುರ: ಕೆದೂರು ಹೊಸಮಠ ಧರ್ಮಗೋಳಿ ದೈವಸ್ಥಾನದ ಅಡುಗೆ ಕೋಣೆ ಬೀಗ ಮುರಿದು ತಾಮ್ರದ ಪಾತ್ರೆ ಕಳವು

Views: 44

ಕನ್ನಡ ಕರಾವಳಿ ಸುದ್ದಿ: ಕೆದೂರು ಗ್ರಾಮದ ಹೊಸಮಠ ಧರ್ಮಗೋಳಿ ಹಳೆಯಮ್ಮ ದೈವಸ್ಥಾನದ ಅಡುಗೆ ಕೋಣೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 99 ಸಾವಿರ ರೂ.ಮೌಲ್ಯದತಾಮ್ರದಪಾತ್ರೆಗಳನ್ನುಕಳವುಮಾಡಿಕೊಂಡುಹೋದ ಘಟನೆ ಬೆಳಕಿಗೆ ಬಂದಿದೆ.

ದೈವಸ್ಥಾನದ ಕಾರ್ಯಕ್ರಮವೊಂದಕ್ಕೆ ಪಾತ್ರೆಗಳನ್ನು ತೆಗೆಯಲು ಸಭಾಭವನದ ಸಮೀಪದ ಅಡುಗೆ ಕೋಣೆಗೆ ತೆರಳಿದಾಗ ಬೀಗ ಒಡೆದಿರುವುದು ಕಂಡುಬಂದಿದೆ. ಅ.18ರ ಸಂಜೆ 7 ಗಂಟೆಯಿಂದ ನ.17ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಅಡುಗೆ ಕೋಣೆಯ ಬೀಗ ಮುರಿದು ಒಳ ನುಗ್ಗಿ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!