ರಾಜಕೀಯ

ಇಂದು ತಾಪಂ, ಜಿಪಂ ಕ್ಷೇತ್ರ ಮೀಸಲು ಅಂತಿಮ ಅಧಿಸೂಚನೆ ಪ್ರಕಟ 

Views: 29

ಕನ್ನಡ ಕರಾವಳಿ ಸುದ್ದಿ: ರಾಜ್ಯ ಸರಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ದವಾಗಿದ್ದು, ಕ್ಷೇತ್ರಗಳ ಮೀಸಲು ಅಂತಿಮ ಅಧಿಸೂಚನೆ ಶುಕ್ರವಾರ ಪ್ರಕಟವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ‌ ‌ ‌ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 30 ಜಿಲ್ಲೆಗಳ 1101 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಹಾಗೂ 234 ತಾಲೂಕು ಪಂಚಾಯತಿಗಳ 3580 ಸದಸ್ಯ ಸ್ಥಾನಕ್ಕೆ ಸಂಬಂಧಿಸಿದಂತೆ ಮೀಸಲು ನಿಗದಿ ಮಾಡಿ ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಕರಡು ಅಧಿಸೂಚನೆಯ ಬಳಿಕ ಅಕ್ಟೋಬರ್ 19ರವರೆಗೆ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 2900ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿ ದ್ದವು. ಎಲ್ಲ ಆಕ್ಷೇಪಣೆಗಳನ್ನೂ ಪರಿಶೀಲಿಸಿ ಕ್ಷೇತ್ರಗಳ ಅಂತಿಮ ಅಧಿಸೂಚನೆ ಸಿದ್ಧ ಪಡಿಸಲಾಗಿದ್ದು ಅಧಿಸೂಚನೆ ಆಗಲಿದೆ ಎಂದರು.

Related Articles

Back to top button
error: Content is protected !!