ಕರಾವಳಿ
ಕುಂದಾಪುರ: ಕೋಡಿ ಕಡಲತೀರಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನು ಸಂಗ್ರಹಿಸಲು ಬಂದ ಜನ!
Views: 113
ಕನ್ನಡ ಕರಾವಳಿ ಸುದ್ದಿ: ಶನಿವಾರ ಬೆಳಿಗ್ಗೆ ಕುಂದಾಪುರ ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ ರಾಶಿಯಾಗಿ ದಡಕ್ಕೆ ಬಂದಿದ್ದು ಮೀನುಗಳನ್ನು ಹಿಡಿಯಲು ನೂರಾರು ಜನರು ಕಡಲತೀರಕ್ಕೆ ಆಗಮಿಸಿದರು.
ಸಮುದ್ರದ ಅಲೆಗಳ ಜೊತೆಗೆ ದಡಕ್ಕೆ ಬಂದ ಬೂತಾಯಿ ಗಳನ್ನು ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸೇರಿದಂತೆ ನೂರಾರು ಜನರು ಧಾವಿಸಿದರು. ಜನರು ಕೈಚೀಲಗಳು ಮತ್ತು ಬಕೆಟ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಮೀನುಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂತು.
ಸಮುದ್ರದ ದಡದಲ್ಲಿ ಬೂತಾಯಿ ಮೀನುಗಳನ್ನು ಕಂಡ ತಕ್ಷಣ ಜನ ಸಾಮಾನ್ಯರು ತಮ್ಮ ಕೈಯಲ್ಲಿದ್ದ ಬಕೆಟ್, ಪ್ಲಾಸ್ಟಿಕ್ ಚೀಲ, ಹಾಗೂ ಬುಟ್ಟಿಗಳನ್ನು ತಂದು ಮೀನುಗಳನ್ನು ಹೆಕ್ಕಿ ತುಂಬಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಗುಂಪಾಗಿ ಸಂಚರಿಸುವ ಬೂತಾಯಿ ಮೀನುಗಳು, ಕಡಲಿನ ಪ್ರವಾಹದ ಬದಲಾವಣೆ ಅಥವಾ ದೊಡ್ಡ ಬೋಟ್‌ಗಳ ಚಲನೆಯಿಂದ ದಿಕ್ಕು ತಪ್ಪಿ, ಅಲೆಗಳ ಭೋರ್ಗರೆತಕ್ಕೆ ಸಿಲುಕಿ ದಡ ಸೇರುತ್ತವೆ ಎಂದು ಕರಾವಳಿ ಭಾಗದಲ್ಲಿ ಹೇಳಲಾಗುತ್ತದೆ






