ಇತರೆ

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಹೆದ್ದಾರಿ ರಸ್ತೆಯ ಬದಿಯಲ್ಲಿ ತಲೆ ಬುರುಡೆ ಪತ್ತೆ..! ಈ ಬುರುಡೆ ಯಾರದ್ದು..?  ಅಲ್ಲಿಗೆ ಹೇಗೆ ಬಂತು?

Views: 90

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಮುಂಭಾಗದ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಮಾನವನ ತಲೆ ಬುರುಡೆಯೊಂದು ಪತ್ತೆಯಾಗಿದೆ. ಈ ಸ್ಥಳದಲ್ಲಿ ಕೇವಲ ತಲೆಬುರುಡೆ ಮಾತ್ರ ಕಂಡುಬಂದಿದ್ದು, ದೇಹದ ಇತರ ಯಾವುದೇ ಭಾಗಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಮುಂಭಾಗದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ನವೆಂಬರ್ 12 ರಂದು ಸಂಜೆ ಈ ತಲೆಬುರುಡೆ ಪತ್ತೆಯಾಗಿದೆ.

ರಸ್ತೆ ಬದಿಯಲ್ಲಿ ಬಿದ್ದಿದ್ದ ತಲೆಬುರುಡೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಧರ್ಮಸ್ಥಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಧರ್ಮಸ್ಥಳ ಪೊಲೀಸರು ಹಾಗೂ ಸೋಕೋ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ತಲೆಬುರುಡೆ ಯಾರದ್ದು ಮತ್ತು ಅಲ್ಲಿಗೆ ಹೇಗೆ ಬಂತು ಎಂಬ ಕುರಿತು ವಿಧಿವಿಜ್ಞಾನ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Related Articles

Back to top button
error: Content is protected !!