ಇತರೆ
ಸೌಜನ್ಯ ಮರಣೋತ್ತರ ಪರೀಕ್ಷೆ ವೇಳೆ ಸಹಾಯಕರಾಗಿದ್ದ ವಾರ್ಡ್ ಬಾಯ್ 5 ಗಂಟೆ ವಿಚಾರಣೆ ನಡೆಸಿದ ಎಸ್‌ಐಟಿ..!
Views: 33
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಮುಂದುವರಿದಿದ್ದು, ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ವೈದ್ಯರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಸಹಾಯಕರಾಗಿದ್ದ ಅನಿಲ್ ಕುಮಾರ್ ಅವರು, ಮೃತದೇಹವನ್ನು ಪರೀಕ್ಷೆಗಾಗಿ ಕೊಯ್ದ ಪ್ರಕ್ರಿಯೆಯಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ.ಪೋಸ್ಟ್ ಮಾರ್ಟಂ ಪರೀಕ್ಷೆಯಲ್ಲಿ ಸೌಜನ್ಯಾ ಹೊಟ್ಟೆಯಲ್ಲಿ ಕೆಲವೇ ಗಂಟೆಗಳ ಹಿಂದೆ ತಿಂದಿದ್ದ ಅನ್ನ ಇತ್ತು ಎನ್ನುವ ವಿಚಾರ ತಿಳಿದುಬಂದಿದ್ದರಿಂದ ಆಕೆಗೆ ಯಾರೋ ಅನ್ನ ತಿನ್ನಿಸಿದ್ದರು ಎನ್ನುವ ವಿಚಾರ ಸಂಶಯಕ್ಕೀಡಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಅನಿಲ್ ಕುಮಾರ್ ಅವರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ವಿಚಾರಣೆ ಇದೀಗ ಮುಕ್ತಾಯಗೊಂಡಿದೆ.






