ಇತರೆ

ಕುಂದಾಪುರ: ಅರಾಟೆ ಸೇತುವೆ ಬಳಿ ಸ್ಕೂಟಿ – ಕಾರು ಡಿಕ್ಕಿ, ಸವಾರ ಸಾವು 

Views: 193

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಮೀಪ ಅರಾಟೆ ಸೇತುವೆ ಬಳಿ ಸ್ಕೂಟಿ – ಕಾರು ಮುಖಾಮುಖಿ ಡಿಕ್ಕಿಯಲ್ಲಿ ಕುಂದಾಪುರದ ವ್ಯಕ್ತಿ ಮೃತಪಟ್ಟಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರ್  ಅಜಿತ್ ಪೌಲ್ ಲುವಿಸ್ ( 55) ಮೃತಪಟ್ಟವರು.ಕುಂದಾಪುರ J.L.B ರಸ್ತೆಯ ನಿವಾಸಿಯಾದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಇಂದು ಅವರು ಸ್ಕೂಟಿಯಲ್ಲಿ ತ್ರಾಸಿ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಜಿತ್ ಲುವಿಸ್ 1990 ದಶಕದಲ್ಲಿ ಕುಂದಾಪುರದಲ್ಲಿ ಅವರ ಮಿತ್ರ ಸತೀಶ್ ಖಾರ್ವಿ ಜೊತೆಗೂಡಿ ” SANJOSE” DATA SYSTEMS ಎಂಬ ಜನಪ್ರಿಯ ಗ್ರಾಫಿಕ್ಸ್ ಸಂಸ್ಥೆ ಸ್ಥಾಪಿಸಿದ್ದರು. ನಂತರ ಹಲವು ವರ್ಷ ಗಲ್ಫ್ ರಾಷ್ಟ್ರದಲ್ಲಿ ದುಡಿದು ಇತ್ತೀಚೆಗೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು.

ಮೃತ ಅಜಿತ್ ಪೌಲ್ ದೆಹಲಿಯಲ್ಲಿ ಕಂಪೆನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು ವರ್ಷದಲ್ಲಿ ನಾಲ್ಕೈದು ಬಾರಿ ಊರಿಗೆ ಬರುತ್ತಿದ್ದರು. ಈ ಬಾರಿ ತಾಯಿ ಅನಾರೋಗ್ಯದ ಹಿನ್ನೆಲೆ ಕಳೆದ 8-10 ದಿನಗಳ ಹಿಂದಷ್ಟೆ ಊರಿಗೆ ಆಗಮಿಸಿದ್ದರು. ಮುಳ್ಳಿಕಟ್ಟೆ ಸಮೀಪದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಪುತ್ರಿಯ ಶೈಕ್ಷಣಿಕ ಪ್ರಗತಿ ತಿಳಿಯಲು ಸೋಮವಾರ‌ ಶಾಲೆಗೆ ಭೇಟಿಯಾಗಲೆಂದು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related Articles

Back to top button
error: Content is protected !!