ಲೇಖಕ ಕಾಳಾವರ ಗಣಪಯ್ಯ ಶೆಟ್ಟಿಗಾರ್ ವಿರಚಿತ “ಪುರಾಣ ಲೋಕದ ಶಾಪಗಳು” ಕೃತಿ ಬಿಡುಗಡೆ
Views: 130
ಕನ್ನಡ ಕರಾವಳಿ ಸುದ್ದಿ: ಹಿರಿಯ ಲೇಖಕ ಕಾಳಾವರ ಗಣಪಯ್ಯ ಶೆಟ್ಟಿಗಾರ್ ವಿರಚಿತ ‘ಪುರಾಣ ಲೋಕದ ಶಾಪಗಳು’ ಕೃತಿ ಬಿಡುಗಡೆ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 40ನೇ ವಾರ್ಷಿಕ ಮಹಾಸಭಾ ಕಾರ್ಯಕ್ರಮದಲ್ಲಿ ಕೋಟೇಶ್ವರದ ಶ್ರೀ ಕಮಲಮ್ಮ ಸರ್ವೋತ್ತಮ ಬುಧ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ವಿಜಯ ಕರ್ನಾಟಕ ರೆಸ್ಪಾನ್ಸ್ ಹೆಡ್ ರವಿ.ಎಸ್.ಶೆಟ್ಟಿಗಾರ್ ಕೃತಿ ಬಿಡುಗಡೆಗೊಳಿಸಿದರು.
ಅನ್ಯಾಯ, ಅನಾಚಾರ ಮತ್ತು ಅನೇಕ ತರಹದ ಪಾಪ ಕೃತ್ಯಗಳನ್ನೆಸಗುತ್ತಾ ಭೂಲೋಕದಲ್ಲಿ ಶಾಪಕ್ಕೆ ಗುರಿಯಾದ ಮಾನವರು ಪುಣ್ಯಕರವಾದ ಪುರಾಣದ ಕಥೆಗಳನ್ನು ಓದುವುದರಿಂದ ಶಾಪದಿಂದ ಮುಕ್ತಿ ಹೊಂದಿ ಸದ್ಗತಿಯನ್ನು ಪಡೆಯಬಹುದಾಗಿದೆ ಎಂಬ ಸಂದೇಶದೊಂದಿಗೆ ಲೇಖಕರಾದ ಕಾಳಾವರ ಗಣಪಯ್ಯ ಶೆಟ್ಟಿಗಾರ ಅವರು “ನಿನಗಾಗಿಯೂ ಬದುಕು”, “ಪರರಿಗಾಗಿಯೂ ಬದುಕು”, “ತ್ಯಾಗವೇ ಶ್ರೇಷ್ಠವಾದ ಯೋಗ”, “ಗುರು-ಅರ್ಥ ಮತ್ತು ವಿಸ್ತಾರ”,”ಮಾತೆ ಮಮತೆಯ ಮೂರ್ತಿ”, “ದಾಂಪತ್ಯ ಜೀವನದಲ್ಲಿ ಹೆಣ್ಣಿನ ಹಿರಿಮೆ”ಎಂಬ ಲೇಖನವನ್ನು ಪ್ರಕಟಿಸಿದ್ದು, ನಂತರ “ನಾವು ದೇವರನ್ನು ನಂಬುವ” “ಉಪಕಥೆಗಳು” ಹಾಗೂ ಎಂಬ ಪುಸ್ತಕವನ್ನು ಈ ಹಿಂದೆ ಬಿಡುಗಡೆಗೊಳಿಸಿ ಸಾಹಿತ್ಯಾಸಕ್ತರ ಮನಗೆದ್ದಿದ್ದಾರೆ.

ಸಂಘದ ಅಧ್ಯಕ್ಷರಾದ ಡಾ.ಚಂದ್ರಶೇಖರ್ ವಿ.ಎಸ್.ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಕಾರ್ಯದರ್ಶಿ ಡಾ. ವೆಂಕಟ್ರಾಯ ಶೆಟ್ಟಿಗಾರ್, ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರದ ಕಟ್ಟಡ ಸಮಿತಿ ಅಧ್ಯಕ್ಷರಾದ ಡಾ. ಬಸವರಾಜ್ ಶೆಟ್ಟಿಗಾರ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಉಪಾಧ್ಯಕ್ಷರಾದ ರತ್ನಾಕರ ಇಂದ್ರಾಳಿ, ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್, ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರ ಮಹಿಳಾ ಸಂಚಾಲಕಿ ರಾಜೀವಿ ಶೆಟ್ಟಿಗಾರ್, ಸಂಘದ ಗೌರವಾಧ್ಯಕ್ಷ ಜನಾರ್ಧನ್ ಶೆಟ್ಟಿಗಾರ್ ವಕ್ವಾಡಿ, ಡಾ. ಶಿವಪ್ರಸಾದ್ ಕೆ ಉಡುಪಿ, ಇಂಜಿನಿಯರ್ ಸುರೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದು,ಶುಭಹಾರೈಸಿದರು.






